ಮುಂಬೈ, ಫೆ 8(DaijiworldNews/AK): ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಉಲ್ಲಾಸ ಉತ್ಸಾಹ ಚಿತ್ರದಲ್ಲಿ ನಟಿಸಿದ್ದ ಯಾಮಿ ಗೌತಮ್ ಇದೀಗ ತಮ್ಮ ಅಭಿಮಾನಿಗಳಿಗೆಂದು ಸಿಹಿ ಸುದ್ದಿ ನೀಡಿದ್ದಾರೆ. ನಟಿ ಯಾಮಿ ದಂಪತಿಗಳು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಫೆ.23ರಂದು ರಿಲೀಸ್ ಅಗಲಿರುವ ‘ಆರ್ಟಿಕಲ್ 370’ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ನಿರ್ದೇಶಕ ಆದಿತ್ಯ ಧಾರ್- ಯಾಮಿ ಜೋಡಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವುದನ್ನ ತಿಳಿಸಿದ್ದಾರೆ. ಪತ್ನಿ ಯಾಮಿ ಐದೂವರೆ ತಿಂಗಳ ಪ್ರೆಗ್ನೆಂಟ್ ಎಂದು ತಿಳಿಸಿದ್ದಾರೆ.
ಮದುವೆಯಾಗಿ 3 ವರ್ಷಗಳ ನಂತರ ಯಾಮಿ-ಆದಿತ್ಯ ದಂಪತಿಗಳು ಮಗು ಬರುವ ಖುಷಿಯಲ್ಲಿದ್ದಾರೆ. ಈ ಜೋಡಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
2019ರಲ್ಲಿ ಉರಿ ಸಿನಿಮಾ ವೇಳೆ, ನಿರ್ದೇಶಕ ಆದಿತ್ಯಾ ಧಾರ್ ಮತ್ತು ಯಾಮಿ ಪರಿಚಯವಾಗಿ 2 ವರ್ಷಗಳ ಡೇಟಿಂಗ್ ನಂತರ 2021ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಯಾಮಿ-ಆದಿತ್ಯ ಧಾರ್ ಮದುವೆಯಾದರು.