ಬೆಂಗಳೂರು, ಫೆ 3(DaijiworldNews/SK): ಸ್ಯಾಂಡಲ್ ವುಡ್ ಸಿನಿರಂಗದಲ್ಲಿ 'ಪುಷ್ಪವತಿ' ಎಂದೇ ಗುರುತಿಸಿಕೊಳ್ಳುವ ನಟಿ ನಿಮಿಕಾ ರತ್ನಾಕರ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಶೇಕ್ ಇಟ್ ಪುಷ್ಪವತಿ ಎಂಬ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಪ್ರಸಿದ್ಧಿ ಪಡೆದುಕೊಂಡವರು. ಇದೀಗ ಈ ಹಾಡಿನ ಮೂಲಕವೇ ಹಂಪಿ ಉತ್ಸವದಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸ್ಮರಿಸಿಕೊಳ್ಳುವ ಈ ವರ್ಷದ ಹಂಪಿ ಉತ್ಸವಕ್ಕೆ ರಾಜ್ಯ ಸರ್ಕಾರ ಮುಹೂರ್ತ ನಿಗದಿ ಮಾಡಿದ್ದು, ಫೆ. 4ರಿಂದ ಮೂರು ದಿನಗಳ ಹಂಪಿ ಉತ್ಸವ ನಡೆಯಲಿದೆ.
ಈ ಉತ್ಸವದಲ್ಲಿ ವಿವಿಧ ಪ್ರಕಾರಗಳ ಕಲಾ ಪ್ರದರ್ಶನ, ನಾನ ಕಾರ್ಯಕ್ರಮಗಳು ಹಂಪಿ ಉತ್ಸವದ ಪ್ರಮುಖ ಆಕರ್ಷಣೆ. ಇಷ್ಟೂ ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಅನೇಕ ನಟ ನಟಿಯರು ಈ ಉತ್ಸವದಲ್ಲಿ ಭಾಗಿಯಾಗಿ ಉತ್ಸವದ ಮೆರಗನ್ನು ಹೆಚ್ಚಿಸಿದ್ದಾರೆ. ಇದೀಗಾ ಅಂಥಾದ್ದೊಂದು ಸುವರ್ಣಾವಕಾಶ ಶೇಕ್ ಇಟ್ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್ ಅವರಿಗೆ ಲಭಿಸಿದೆ.