ಮುಂಬೈ, ಫೆ 01 (DaijiworldNews/PC): ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಅವರ ಪತಿ ಗಾಯಕ ನಿಕ್ ಜೋನಾಸ್ ಲಾಸ್ ಎಂಜಲೀಸ್ ನ ದುಬಾರಿ ಮನೆಯನ್ನು ಖಾಲಿ ಮಾಡಿದ್ದು, ಮನೆ ಮಾರಾಟ ಮಾಡಿದವನ ವಿರುದ್ಧ ದೂರು ದಾಖಲಿಸಿರುವುದಾಗಿ ತಿಳಿದುಬಂದಿದೆ.
ಸುಮಾರು 166 ಕೋಟಿ ರೂ. ಗಳಷ್ಟು ನೀಡಿ ಖರೀದಿಸಿದ್ದ ಲಾಸ್ ಎಂಜಲೀಸ್ ನ ದುಬಾರಿ ಮನೆಯನ್ನು ಖಾಲಿ ಮಾಡಿ ಬೇರೊಂದು ಮನೆಗೆ ಶಿಫ್ಟ್ ಆಗಿದ್ದಾರೆ. ಅವರು ವಾಸವಿದ್ದ ಮನೆಯಲ್ಲಿ ನೀರು ಸೋರಿಕೆ ಸಮಸ್ಯೆ ಕಾಣಿಸಿಕೊಂಡಿದೆ. ಮನೆಯ ಪೂಲ್ ಮತ್ತು ಸ್ಪಾ ಪ್ರದೇಶದಲ್ಲಿ, ಅಡುಗೆ ಮನೆ, ಲೀವಿಂಗ್ ಏರಿಯಾದಲ್ಲೂ ನೀರು ಸೋರಿಕೆ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಮನೆಯ ಹಲವು ಸಾಮಾಗ್ರಿಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.
ನೀರು ಸೋರಿಕೆಯಿಂದ ಅನುಭವಿಸಿದ ನಷ್ಟಕ್ಕೆ, ದುರಸ್ತಿ ವೆಚ್ಚಗಳಿಗೆ ಮರುಪಾವತಿ ಮಾಡಬೇಕು ಹಾಗೂ ಇತರೆ ಹಾನಿಗೆ ಪರಿಹಾರವನ್ನು ನೀಡಬೇಕೆಂದು ಮಾರಾಟಗಾರನ ವಿರುದ್ಧ ದೂರು ದಾಖಲು ಮಾಡಿದ್ದಾರೆ. ನೀರಿನ ಸೋರಿಕೆಯಿಂದ 12 ಕೋಟಿ ರೂ. ಸಾಮಾನ್ಯ ಹಾನಿಯಿಂದ ಸುಮಾರು ರೂ.20 ಕೋಟಿಗಿಂತ ಹೆಚ್ಚು ನಷ್ಟವಾಗಿದೆ.
ಪ್ರಿಯಾಂಕಾ ದಂಪತಿ 2019 ರಲ್ಲಿ ಈ ಐಷಾರಾಮಿ ಮನೆಯನ್ನು ಖರೀದಿಸಿದ್ದರು. ಇದು ಏಳು ಬೆಡ್ ರೂಮ್, ಒಂಬತ್ತು ಬಾತ್ ರೂಮ್, ಅಡುಗೆಮನೆ, ತಾಪಮಾನ-ನಿಯಂತ್ರಿತ ವೈನ್ ಕೊಠಡಿ, ಒಳಾಂಗಣ ಬಾಸ್ಕೆಟ್ಬಾಲ್ ಅಂಕಣ, ಹೋಮ್ ಥಿಯೇಟರ್, ಮನರಂಜನಾ ಕೋಣೆ, ಸ್ಪಾ ಪ್ರದೇಶ, ಜಿಮ್ ಮತ್ತು ಬಿಲಿಯರ್ಡ್ಸ್ ಕೋಣೆಯನ್ನು ಹೊಂದಿದೆ.