ಮುಂಬೈ, ಜ 31 (DaijiworldNews/AA): 'ಇವಳು ಯಾವ ತಾಯಿ? ಮಕ್ಕಳಿಗೆ ಒಳ್ಳೆಯ ಅಭ್ಯಾಸಗಳನ್ನು ಕಲಿಸುವುದಿಲ್ಲ.' ಎಂದು ಬಾಲಿವುಡ್ ನಟಿ ಕರೀನಾ ಕಪೂರ್ ಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಇತ್ತೀಚೆಗೆ ಕರೀನಾ ಕಪೂರ್ ತನ್ನ ಇಬ್ಬರು ಮಕ್ಕಳೊಂದಿಗೆ ಕಾಣಿಸಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದರಲ್ಲಿ ಕರೀನಾ ಅವರು ತನ್ನ ಇಬ್ಬರು ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದು, ನೆಟ್ಟಿಗರು ಅವರ ಪುಟ್ಟ ಮಗ ಜೆಹ್ ನ ವರ್ತನೆಗೆ ಕರೀನಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ಕರೀನಾ ತನ್ನ ಇಬ್ಬರು ಮಕ್ಕಳೊಂದಿಗೆ ಕಾರಿನಿಂದ ಇಳಿದಿದ್ದು, ಜೆಹ್ ಹಿಂದೆ ತೈಮೂರ್ ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಜೆಹ್ ಸಿಟ್ಟಿನಿಂದ ತನ್ನ ಕೈಯಲ್ಲಿದ್ದ ಕಾಗದವನ್ನು ಎಸೆದಿದ್ದಾನೆ. ಬಳಿಕ ಅದನ್ನು ಅಲ್ಲಿಯೇ ಬಿಟ್ಟು ಒಳ ಹೋಗಿದ್ದಾನೆ. ಅವನ ಹಿಂದೆ ನಿಂತಿದ್ದ ಕರೀನಾ ಅವರು ಜೆಹ್ ನ ವರ್ತನೆ ಕಂಡು ಏನು ಹೇಳುವುದಿಲ್ಲ. ಕೊನೆಗೆ ಇವರೊಂದಿಗೆ ಬಂದ ಸಹಾಯಕಿ ಕಾಗದವನ್ನು ಎತ್ತಿಕೊಳ್ಳುತ್ತಾರೆ. ಇದನ್ನು ಕಂಡು ಸಹ ಕರೀನಾ ಏನೂ ಹೇಳುವುದಿಲ್ಲ.
ಇದೀಗ ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ, 'ಮಕ್ಕಳಿಗೆ ಶಿಸ್ತು ಕಲಿಸಬೇಕು'. 'ಇವಳು ಯಾವ ತಾಯಿ? ಮಕ್ಕಳಿಗೆ ಒಳ್ಳೆಯ ಅಭ್ಯಾಸಗಳನ್ನು ಕಲಿಸುವುದಿಲ್ಲ. ಆ ಪೇಪರ್ ಎತ್ತಲು ಮಗನಿಗೆ ಹೇಳಬೇಕಿತ್ತು' ಎಂದು ಕರೀನಾಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.