ಬೆಂಗಳೂರು,ಏ 24 (Daijiworld News/MSP): ಕನ್ನಡ ಕಂಠೀರವ, ನಟಸಾರ್ವಭೌಮ, ಪದ್ಮಶ್ರೀ ಪುರಸ್ಕೃತ ಡಾ.ರಾಜ್ ಕುಮಾರ್ಗೆ ಇಂದು 91ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ರಾಜ್ಕುಮಾರ್ ಕುಟುಂಬ ಪ್ರತಿ ವರ್ಷದಂತೆ ಬುಧವಾರ ಕೂಡ ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್ ಅವರ ಸ್ಮಾರಕಕ್ಕೆ ಬಂದು ಪೂಜೆ ಸಲ್ಲಿಸಲಿದ್ದಾರೆ.
ಆ ಬಳಿಕ ಮಾತನಾಡಿದ ಡಾ.ಶಿವರಾಜ್ ಕುಮಾರ್ ಚಿಕ್ಕಂದಿನಿಂದ ನಾವು ಅಪ್ಪಾಜಿ, ಅಂಬಿಮಾಮ, ವಿಷ್ಣುಮಾಮರನ್ನು ನೋಡಿಕೊಂಡು ಬೆಳೆದವರು. ಈ ಮೂವರು ಯಾವುದೇ ಅಪೇಕ್ಷೆಗಳಿಲ್ಲದೆ ಕಲಾಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದವರು . ತ್ರಿಮೂರ್ತಿಗಳ ಆತ್ಮೀಯ ಗೆಳೆತನ ತುಂಬಾನೇ ದೊಡ್ಡದು ಅಂತಾ ಸಿನಿ ದಿಗ್ಗಜರ ಹಳೆಯ ನೆನಪುಗಳನ್ನು ಬಿಚ್ಚಿಟ್ಟರು.
ಇನ್ನು ದಿವಗಂತ ಅಂಬರೀಶ್ ಅವರ ಐದನೇ ತಿಂಗಳ ಪುಣ್ಯತಿಥಿ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್ ಕೂಡಾ ಬೆಳಗ್ಗೆ ಕಂಠೀರವ ಸ್ಟುಡಿಯೋಗೆ ಬಂದು ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ್ದರು.