ಬೆಂಗಳೂರು,ಜ 29 (DaijiworldNews/RA):ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಕನ್ನಡ ಸೀಸನ್ 10ರ ಚಾಂಪಿಯನ್ ಆಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿದ್ದು, ಡ್ರೋನ್ ಪ್ರತಾಪ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಈ ವಿನ್ನರ್ ಪಟ್ಟಕ್ಕಾಗಿ ಎಲ್ಲ ಸ್ಪರ್ಧಿಗಳು ಸಾಕಷ್ಟು ಹೋರಾಟವನ್ನು ನಡೆಸಿದ್ದರು.ಅದರಲ್ಲೂ ಸಂಗೀತಾ ಶೃಂಗೇರಿ, ವಿನಯ್ ಗೌಡ ಮತ್ತು ಡ್ರೋನ್ ಪ್ರತಾಪ್ ಅವರು ಬಿಗ್ಬಾಸ್ ಸೀಸನ್ ವಿನ್ನರ್ ಪಟ್ಟಕ್ಕಾಗಿ ಸಾಕಷ್ಟು ಟಾಸ್ಕ್ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.
ಅಂತಿಮ ಮೂರರ ಸುತ್ತಿನಲ್ಲಿ ಸಂಗೀತ ಶೃಂಗೇರಿ ಅವರು ಎರಡನೇ ರನ್ನರ್ ಅಪ್ ಆಗಿ ಹೊರಬಂದಿದ್ದರು.ನಂತರ ವೇದಿಕೆಯ ಮೇಲೆ ಉಳಿದಿದ್ದು ಕಾರ್ತಿಕ್ ಮತ್ತು ಡ್ರೋಣ್ ಪ್ರತಾಪ್.
ಕಿಚ್ಚನ ಒಂದು ಕೈಯಲ್ಲಿ ಕಾರ್ತಿಕ್ ಕೈ ಮತ್ತೊಂದು ಕೈಯಲ್ಲಿ ಪ್ರತಾಪ್ ಕೈ ಇತ್ತು. ಅದರಲ್ಲಿ ಸುದೀಪ್ ಅವರು ಕಾರ್ತಿಕ್ ಅವರ ಕೈಯನ್ನು ಎತ್ತಿ ಹಿಡಿದರು. ಅಂದರೆ ಡ್ರೋಣ್ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಅವರಿಗೆ ಹತ್ತು ಲಕ್ಷ ರೂಪಾಯಿಗಳ ಬಹುಮಾನ ಪಡೆದುಕೊಂಡಿದ್ದಾರೆ.
ಕಾರ್ತಿಕ್ ಅವರು ಬರೋಬ್ಬರಿ 2,97,39,904 ಮತ ಗಳಿಸಿದ್ದಾರೆ.ಇನ್ನು ಇವರು ಆರನೇ ಕಂಟೆಸ್ಟೆಂಟ್ ಆಗಿ ಕಷ್ಟದಲ್ಲೇ ಫಿನಾಲೆ ವಾರಕ್ಕೆ ಬಂದಿದ್ದರು.