ಜ.01 (DaijiworldNews/PC): 2024ಕ್ಕೆ ನಾನು ಅಮ್ಮನಾಗುತ್ತಿದ್ದೇನೆ ಎಂದು ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಅವರು ಗುಡ್ ನ್ಯೂಸ್ ನೀಡಿದ್ದಾರೆ.
‘ಜೀವನದಲ್ಲಿ ಪ್ರತಿಯೊಬ್ಬರೂ ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧ ಅಮ್ಮ. ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ ಅಮ್ಮ. 2024ಕ್ಕೆ ನಾನು ಅಮ್ಮನಾಗುವೆ’ ಎಂದು ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.
2022ರ ನವೆಂಬರ್ ತಿಂಗಳಲ್ಲಿ ಯಶಸ್ ಜೊತೆ ಅವರ ವಿವಾಹ ನೆರವೇರಿತ್ತು. ಈಗ ಅವರು ಗುಡ್ ನ್ಯೂಸ್ ನೀಡಿದ್ದಾರೆ. ಫೋಟೋ ಹಂಚಿಕೊಂಡು ಅವರು ಸಂಭ್ರಮಿಸಿದ್ದಾರೆ.
ಉದ್ಯಮಿ ಯಶಸ್ ಜೊತೆಗೆ ಅದಿತಿ ಅವರ ಮದುವೆ 2022ರ ನವೆಂಬರ್ನಲ್ಲಿ ನಡೆದಿದ್ದು. ಅದಿತಿ ಕಿರುತೆರೆಯಿಂದ ‘ಧೈರ್ಯಂ’ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಹೆಜ್ಜೆ ಇಟ್ಟವರು. ಈಗ ಜನವರಿ 26ರಂದು ಅದಿತಿ ಪ್ರಭುದೇವ ನಟನೆಯ ‘ಅಲೆಕ್ಸಾ’ ಸಿನಿಮಾ ರಿಲೀಸ್ ಆಗುತ್ತಿದ್ದು. ಈ ಮಧ್ಯೆ ಅವರು ಮತ್ತೊಂದು ಖುಷಿ ಸುದ್ದಿ ನೀಡಿದ್ದಾರೆ.