ಬೆಂಗಳೂರು, ಡಿ 23 (daijiworldNews/MR): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಹಾಗೂ ಆತನಿಂದ ಐಷಾರಾಮಿ ಉಡುಗೊರೆ ಪಡೆದುಕೊಂಡಿರುವ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೇಸ್ ಇನ್ನೂ ಮುಗಿದಿಲ್ಲ. ಇವರ ನಡುವೆ ಇಂದಿಗೂ ಪತ್ರವ್ಯವಹಾರ ಮುಂದುವರೆಯುತ್ತಲೇ ಇರುವ ಕಾರಣ ನಟಿ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಗೆ ಸುಕೇಶ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಇತ್ತ ಸುಕೇಶ್ ನಟಿ ಜಾಕ್ವೆಲಿನ್ ಬಣ್ಣ ಬಯಲು ಮಾಡುತ್ತೇನೆ ಎಂದು ಗುಡುಗಿದ್ದಾರೆ.
ಇದರ ಬೆನ್ನಲ್ಲೇ ಈಗ ಸುಕೇಶ್ ಜೈಲಿನಿಂದ ಬರೆಯುತ್ತಿರುವ ಲವ್ ಲೆಟರ್ಗಳು ನಟಿಯನ್ನು ಇನ್ನಷ್ಟು ಚಿಂತೆಗೀಡು ಮಾಡುತ್ತಿದೆ. ಇದರ ವಿರುದ್ಧ ನಟಿ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಸುಕೇಶ್ ಚಂದ್ರಶೇಖರ್ ನ್ಯಾಯಾಂಗ ಬಂಧನದಲ್ಲಿದ್ದು ಅವರಿಂದ ತಮಗೆ ಯಾವುದೇ ಪತ್ರಗಳನ್ನು ನೀಡದಂತೆ ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗ ಮತ್ತು ಮಂಡೋಲಿ ಜೈಲಿನ ಸೂಪರಿಂಟೆಂಡೆಂಟ್ ಅವರಿಗೆ ನಿರ್ದೇಶಿಸುವಂತೆ ಕೋರಿದ್ದಾರೆ ಜಾಕ್ವೆಲಿನ್.
ಯಾವಾಗ ಜಾಕ್ವೆಲಿನ್ ತನ್ನ ವಿರುದ್ಧ ಕೋರ್ಟ್ಗೆ ಹೋದರೋ, ಸುಕೇಶ್ ಕೋಪಗೊಂಡಿದ್ದಾರೆ. ನಟಿಯ ನಿಜವಾದ ಬಣ್ಣ ಬಯಲು ಮಾಡುವುದಾಗಿ ಸುಕೇಶ್ ಜೈಲಿನಿಂದಲೇ ಎಚ್ಚರಿಕೆಯ ಸಂದೇಶ ರವಾನಿಸಿದ್ದಾನೆ. ಕೋಟಿ ಕೋಟಿ ಗಿಫ್ಟ್ ಪಡೆಯುವಾಗ ಸುಮ್ಮನಿದ್ದ ಜಾಕ್ವೆಲಿನ್ ಈಗ ತಾನು ಜೈಲಿಗೆ ಸೇರಿದ ಮೇಲೆ ಕೇಸ್ ಹಾಕಿರುವುದರಿಂದ ರೊಚ್ಚಿಗೆದ್ದಿರುವ ಸುಕೇಶ್.