ಬೆಂಗಳೂರು, ಡಿ13 (DaijiworldNews/MR): ನೂರಾರು ಕೋಟಿ ರೂ. ಸುಲಿಗೆ ಪ್ರಕರಣ ಆರೋಪದಲ್ಲಿ ಜೈಲುವಾಸ ಅನುಭವಿಸುತ್ತಿರುವ ವಂಚಕ ಸುಕೇಶ್ ಚಂದ್ರಶೇಖರ್ ನನ್ನು ಬಂಧಿಸಲಾಗಿದೆ, ಇನ್ನೂ ಸುಕೇಶ್ ಚಂದ್ರಶೇಖರ್ ಅವರ ಸಂಪರ್ಕದಲಿದ್ದ ಆರೋಪ ಹೊಂದಿರುವ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ಕೂಡ ಸಮನ್ಸ್ ನೀಡಲಾಗಿದೆ. ಆರೋಪಿ ಸುಕೇಶ್, ನಟಿ ಜಾಕ್ವೆಲಿನ್ ಅವರಿಗೆ ಪತ್ರಗಳನ್ನು ಬರೆಯುತ್ತಲೇ ಇದ್ದ.
ಆರೋಪಿ ಸುಕೇಶ್ ಕ್ರಿಸ್ಮಸ್ ಸಂದರ್ಭದಲ್ಲಿ ಆಕೆಗೆ ಪ್ರೀತಿಯ ಕರೆಯೋಲೆ ಕಳುಹಿಸಿದ್ದಾನೆ ಎನ್ನಲಾಗಿದೆ. ಈ ಪತ್ರದಲ್ಲಿ ‘ಲವ್’, ‘ಬೇಬಿ’ ಮೊದಲಾದ ಶಬ್ಧಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿ ಬರೆದಿರುವ ಪತ್ರದಲ್ಲಿ ʻʻಬೇಬಿ ಸೋ ಸೋ ಹ್ಯಾಪಿ ಫಾರ್ ಯೂ. ಚಿತ್ರರಂಗಕ್ಕೆ ನೀನು ನೀಡಿದ ಕೊಡುಗೆ ಆಧರಿಸಿ DIAFA ಅವಾರ್ಡ್ ನಿನಗೆ ನೀಡಲಾಗಿದೆ. ಪ್ರಶಸ್ತಿಯನ್ನು ಪಡೆದಿದ್ದಕಾಗಿ ನಿನಗೆ ಅಭಿನಂದನೆಗಳು. ಅವಾರ್ಡ್ಸ್ ಕಾರ್ಯಕ್ರಮದಲ್ಲಿ ನೀನು ಧರಿಸಿದ್ದ ವೈಟ್ ಗೌನ್ ನಲ್ಲಿ ಅದ್ಭುತವಾಗಿ ಕಾಣುತ್ತಿದ್ದೆ. ನನಗೆ ತುಂಬ ಖುಷಿಯಾಗಿದೆ ಎಂದು ನಮೂದಿಸಿದ್ದಾನೆ.
ಜಾಕ್ವೆಲಿನ್ ಅವರ ಇತರ ಕೆಲವು ಫೋಟೊಗಳ ಬಗ್ಗೆ ಸುಕೇಶ್ ಮತ್ತಷ್ಟು ಬರೆದುಕೊಂಡಿದ್ದು, ರೆಡ್ ಅರೇಬಿಕ್ ಡ್ರೆಸ್ ಹಾಗೂ ಪಿಂಕ್ ಬಣ್ಣದ ಸೀರೆಯಲ್ಲಿ ನೀನು ತುಂಬ ಚೆನ್ನಾಗಿ ಕಾಣುತ್ತಿದ್ದೆ. ಈ ಜಗತ್ತಿನಲ್ಲಿ ನನಗೆ ಸಿಕ್ಕ ಏಕೈಕ ದೇವತೆ ನೀನು. ಲೆಹೆಂಗಾದಲ್ಲಿ ನಿನ್ನ ನೋಡುವಾಗ ʻಸೋ ಬ್ಯೂಟಿಫುಲ್ ಸೋ ಸ್ಟನ್ನಿಂಗ್. ಜಸ್ಟ್ ಲುಕಿಂಗ್ ಲೈಕ್ ಎ ವಾವ್’ ಎಂದು ಬರೆದಿದ್ದಾನೆ.
ಸುಕೇಶ್ ಚಂದ್ರಶೇಖರ್ ವಿರುದ್ಧ ಕೇಳಿಬಂದಿರುವ ವಂಚನೆ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದ್ದಲ್ಲದೆ, ಬಾಲಿವುಡ್ ನಂಟೂ ಬಿಚ್ಚಿಟ್ಟಿದೆ. ಸುಕೇಶ್ ಚಂದ್ರಶೇಖರ್ನಿಂದ ಕೋಟ್ಯಂತರ ಮೌಲ್ಯದ ಉಡುಗೊರೆ ಪಡೆದ ಆರೋಪದಲ್ಲಿ ಈಗಾಗಲೇ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ತನಿಖಾ ಸಂಸ್ಥೆಯು ವಿಚಾರಣೆ ನಡೆಸಿದೆ. ಇದರೊಂದಿಗೆ ಇನ್ನೋರ್ವ ಸೆಲಬ್ರೇಟಿ ನೋರಾ ಫತೇಹಿ ಅವರ ಹೆಸರು ಕೂಡ ಪ್ರಕರಣದಲ್ಲಿ ಕೇಳಿಬಂದಿದೆ.