ಮುಂಬೈ, ಡಿ 05 (DaijiworldNews/PC): ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಈಗ ಇನ್ಸ್ಟಾಗ್ರಾಮ್ ನಲ್ಲಿ 40 ಮಿಲಿಯನ್, ಅಂದರೆ 4 ಕೋಟಿ ಜನರು ಫಾಲೋ ಮಾಡುತ್ತಿದ್ದಾರೆ. ಇದರ ಜೊತೆ ‘ಅನಿಮಲ್’ಸಿನಿಮಾ ಕೂಡ ಗೆದ್ದಿರುವುದು ನಟಿಯ ಪಾಲಿಗೆ ಎರಡು ಅದೃಷ್ಟ ಒಟ್ಟಿಗೆ ಹೊಡೆದಿದೆ.
ಡಿಸೆಂಬರ್ 1ರಂದು ‘ಅನಿಮಲ್’ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಿತ್ತು. ರಿಲೀಸ್ ಆಗಿ ನಾಲ್ಕೇ ದಿನಕ್ಕೆ 425 ಕೋಟಿ ರೂಪಾಯಿ ಬಾಚಿದೆ. 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವತ್ತ ಮುನ್ನುಗ್ಗುತ್ತಿದೆ.‘ಅನಿಮಲ್’ಚಿತ್ರದ ಬಗ್ಗೆ ಟಾಕ್ ಇರೋದು ನೋಡಿದ್ರೆ, 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದರೂ ಅಚ್ಚರಿಪಡಬೇಕಿಲ್ಲ ಎನ್ನುತ್ತಿದ್ದಾರೆ ಪ್ರೇಕ್ಷಕರು.
ಸೆಲೆಬ್ರಿಟಿಸ್ ಗಳು ಕೇವಲ ಸಿನಿಮಾದಿಂದ ಅಷ್ಟೇ ಅಲ್ಲದೇ ಸೋಶಿಯಲ್ ಮೀಡಿಯಾದಿಂದಲೂ ಹಣ ಗಳಿಸುತ್ತಾರೆ. ಅವರು ಮಾಡುವ ಪ್ರತಿ ಪೋಸ್ಟ್ಗೆ ಲಕ್ಷಾಂತರ ರೂಪಾಯಿ ಹಣ ಬರುತ್ತದೆ. ಕಮರ್ಷಿಯಲ್ ಪೋಸ್ಟ್ಗಳನ್ನು ಮಾಡಿದರೆ ಕೋಟ್ಯಂತರ ರೂಪಾಯಿ ಹರಿದು ಬರುತ್ತದೆ. ಹಾಗಾಗಿ ಹೆಚ್ಚಿನ ಫಾಲೋವರ್ಸ್ ಹೊಂದಿರುವ ಸೆಲೆಬ್ರಿಟಿಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ರಶ್ಮಿಕಾ ಮಂದಣ್ಣ ಅವರು ಈ ವಿಚಾರದಲ್ಲಿ ಮುಂದಿದ್ದಾರೆ. ಸದ್ಯ ಅವರಿಗೆ ವಿವಿಧ ಹೊಸ ಹೊಸ ಆಫರ್ಗಳು ಹರಿದು ಬರುತ್ತಿವೆ.