ಮುಂಬೈ, ನ 24 (DaijiworldNews/AK): ನಟಿ ಸಾರಾ ಅಲಿ ಖಾನ್ ಅವರು ಅಮೃತಾ ಸಿಂಗ್ ಮತ್ತು ಸೈಫ್ ಅಲಿ ಖಾನ್ ಅವರ ಪುತ್ರಿ. ಸೈಫ್ ಜೊತೆಗಿನ ವಿಚ್ಛೇದನದ ನಂತರ ಅಮೃತಾ ಅವರು ಮಕ್ಕಳಾದ ಸಾರಾ ಮತ್ತು ಇಬ್ರಾಹಿಂ ಅವರನ್ನು ಬೆಳೆಸಿದರು. ಮಗಳು ನನ್ನಂತೆ ಮದುವೆ ಆದರೆ ಅವಳ ಕೆನ್ನೆಗೆ ಹೊಡೆಯುತ್ತೇನೆ ಎಂದು ಅಮೃತಾ ಸಿಂಗ್ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.
ಅಮೃತಾಗಿಂತ ಮುಂಚೆ ಸೈಫ್ ಅನೇಕರ ಜೊತೆ ಸುತ್ತಾಟ ನಡೆಸಿದ್ದರು. ಅಮೃತಾ ಅವರನ್ನು ಭೇಟಿಯಾದ ನಂತರ ಅವರು ನೇರವಾಗಿ ಮದುವೆಯಾಗಲು ನಿರ್ಧರಿಸಿದರು. ಇಬ್ಬರೂ 1991ರಲ್ಲಿ ಗುಟ್ಟಾಗಿ ಮದುವೆಯಾದರು. ಆ ಬಳಿಕ ಇವರ ಮದುವೆ ವಿಚಾರ ಹೊರಬಿತ್ತು. ಇಬ್ಬರ ಮಧ್ಯೆ 12 ವರ್ಷಗಳ ವಯಸ್ಸಿನ ಅಂತರವಿತ್ತು. ಮದುವೆಯಾಗಿ 13 ವರ್ಷಗಳ ನಂತರ ಸೈಫ್ ಮತ್ತು ಅಮೃತಾ ಬೇರೆಯಾದರು.
ಸಂದರ್ಶನವೊಂದರಲ್ಲಿ ಅಮೃತಾ ಅವರು ಮಗಳು ಸಾರಾ ಮದುವೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ‘ನನ್ನಂತೆ ನನ್ನ ಮಗಳು ಗುಟ್ಟಾಗಿ, ಸಣ್ಣ ವಯಸ್ಸಿನಲ್ಲಿ ಮದುವೆಯಾಗುವ ತಪ್ಪು ಮಾಡಿದರೆ ನಾನು ಅವಳ ಕೆನ್ನೆಗೆ ಹೊಡೆಯುತ್ತೇನೆ. ನನ್ನ ಮಕ್ಕಳು ಅದೇ ತಪ್ಪನ್ನು ಪುನರಾವರ್ತಿಸುವುದು ನನಗೆ ಇಷ್ಟವಿಲ್ಲ’ ಎಂದು ಹೇಳಿದ್ದರು.