ಮುಂಬೈ, ನ.20 (DaijiworldNews/PC): ಸಾಮಾನ್ಯವಾಗಿ ಸಿನೆಮಾ ಸ್ಟಾರ್ ಗಳ ವಿವಾಹಕ್ಕೆ ವಿವಿಧ ರೀತಿಯ ವದಂತಿಗಳು ಕೇಳಿ ಬರುತ್ತದೆ. ಇದೇ ರೀತಿ ಇತ್ತೀಚೆಗೆ ನಟ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ವಿವಾಹದ ಬಗ್ಗೆ ವಿವಿಧ ರೀತಿಯ ಮಾತುಗಳು ಕೇಳಿಬರುತ್ತಿದೆ.
ನಟ ಪ್ರಭಾಸ್ ಅವರಿಗೆ ಈಗ 44 ವರ್ಷ ವಯಸ್ಸು. ನಮ್ ಡಾರ್ಲಿಂಗ್ ಪ್ರಭಾಸ್ ಯಾವಾಗ ಮದ್ವೆ ಆಗ್ತಾರೆ ಎಂದು ಅವರ ಫ್ಯಾನ್ಸ್ ಗಳು ಕೇಳುತ್ತಿದ್ದಾರೆ. ಸ್ವೀಟಿ ಅನುಷ್ಕಾ ಶೆಟ್ಟಿ ಜೊತೆಗೇ ಪ್ರಭಾಸ್ ಮದುವೆ ಆಗಬೇಕು ಎಂಬ ಆಸೆ ಇದೆ. ಅದಕ್ಕಾಗಿಯೇನೋ, ಪದೇಪದೇ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆ ಕುರಿತಂತೆ ಹೊಸ ಹೊಸ ವದಂತಿಗಳು ಕೇಳಿಬರುತ್ತಿದೆ.
ಪ್ರಭಾಸ್ ಅವರ ತಾಯಿ ಜಾತಕವನ್ನು ಬಹಳ ನಂಬುತ್ತಾರೆ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅವರ ಜಾತಕ ಹೊಂದಾಣಿಕೆ ಆಗುತ್ತಿಲ್ಲವಂತೆ. ಇಬ್ಬರ ಜಾತಕ ಹೊಂದುತ್ತಿಲ್ಲ ಆದ್ದರಿಂದ ಅವರು ಮದುವೆ ಒಪ್ಪಿಗೆ ನೀಡುತ್ತಿಲ್ಲ ಎನ್ನಲಾಗಿದೆ.ಆ ಕಾರಣಕ್ಕಾಗಿಯೇ ಈ ಮದುವೆ ಇನ್ನೂ ನೆರವೇರಿಲ್ಲ ಎಂಬ ಮಾಹಿತಿಯೊಂದು ಕೇಳಿಬಂದಿದೆ.
ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆ ವದಂತಿಗಳು ಮತ್ತೆ ಮೆಲುಕು ಹಾಕುತ್ತಿದೆ. ಒಟ್ಟಿನಲ್ಲಿ ಅವರಿಬ್ಬರು ಮದುವೆ ಆಗುತ್ತಾರಾ ಅಥವಾ ಬೇರೆಯವರನ್ನ ಮದುವೆ ಆಗುತ್ತಾರಾ ಅಥವಾ ಜೀವನಪರ್ಯಂತ ಒಂಟಿಯಾಗಿಯೇ ಇದ್ದುಬಿಡ್ತಾರಾ ಅನ್ನೋ ಪ್ರಶ್ನೆ ಅಭಿಮಾನಿಗಳದ್ದು.