ಬೆಂಗಳೂರು, ನ 19 (DaijiworldNews/PC): ಕರ್ನಾಟಕದ ರಿಯಾಲಿಟಿ ಶೋ ಗಳಲ್ಲಿ ಅತ್ಯಂತ ಪ್ರಸಿದ್ದವಾದ ‘ಮಜಾಭಾರತ’ ಕಾಮಿಡಿ ರಿಯಾಲಿಟಿ ಶೋ ಖ್ಯಾತಿಯ ಜಗ್ಗಪ್ಪ ಹಾಗೂ ಸುಶ್ಮಿತಾ ನ. 19 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಜಾ ಭಾರತ ಹಾಸ್ಯ ಕಾರ್ಯಕ್ರಮದ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡ ಜಗಪ್ಪ ಮತ್ತು ಸುಶ್ಮಿತಾ ಸುಮಾರು 6 ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ವಿಚಾರವನ್ನು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದಲ್ಲಿ ರಿವೀಲ್ ಮಾಡಿದ್ದು. ಇದೀಗ ಈ ಜೋಡಿಗಳು ವಿವಾಹವಾಗುವ ಮೂಲಕ ಹೊಸ ಜೀವನವನ್ನು ಪ್ರಾರಂಭಿಸಿದ್ದಾರೆ.
ಮಜಾಭಾರತ ಸೆಟ್ನಲ್ಲಿ ಪರಸ್ಪರ ಸ್ನೇಹಿತರಾಗಿ, ಪ್ರೀತಿಸಿ ಈಗ ಬೆಂಗಳೂರಿನ ಜೆಪಿ ನಗರದ ಸಿಂಧು ಕನ್ವೆನ್ಷನ್ ಸೆಂಟರ್ನಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಆಗಿದ್ದಾರೆ. ಇವರ ಮದುವೆಗೆ ಹಲವಾರು ಸೆಲೆಬ್ರಿಟಿಸ್ ಗಳು ವಿವಿಧ ಮಾಧ್ಯಮದವರು ಆಗಮಿಸಿ ಶುಭವನ್ನು ಕೋರಿದ್ದಾರೆ.