ಮುಂಬೈ: ನ 18 (DaijiworldNews/MR): ನಟಿ ಪ್ರಿಯಾಂಕಾ ಚೋಪ್ರಾ ಅವರು ಪಾಪ್ ಗಾಯಕ ನಿಕ್ ಜೋನಸ್ ಅವರನ್ನು ಮದುವೆಯಾದ ನಂತರ ಅಮೆರಿಕಾದಲ್ಲಿ ನೆಲೆಸಿದ್ದಾರೆ.
ಅಲ್ಲಿ ಹೋಟೆಲ್ ಉದ್ಯಮವನ್ನೂ ಪ್ರಾರಂಭಿಸಿದ ಬಳಿಕ ಪಾಲುದಾರಿಕೆ ಒಪ್ಪಂದದ ಕೊರತೆಯಿಂದಾಗಿ, ಉದ್ಯಮದಿಂದ ಹೊರ ಬಂದಿದ್ದಾರೆ.
ಈಗ ತಮ್ಮ ನಟನಾ ವೃತ್ತಿ ಜೀವನದ ಮೇಲೆ ಸಂಪೂರ್ಣವಾಗಿ ಗಮನ ಕೇಂದ್ರೀಕರಿಸಿರುವ ಪ್ರಿಯಾಂಕಾ. ಮುಂಬೈ ಜೊತೆಗಿನ ಸಂಬಂಧವನ್ನು ಕಳೆದುಕೊಳ್ಳಲು ಉದ್ದೇಶಿಸಿದ್ದಾರೆ ಎಂಬ ಊಹಾಪೋಹಗಳು ಕೇಳಿ ಬಂದಿದೆ.
ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದ ಪ್ರಿಯಾಂಕಾ ಚೋಪ್ರಾ ಈಗಾಗಲೇ ಮುಂಬೈನಲ್ಲಿ ನೆಲೆಸಿದ್ದರು. ಈ ಸಮಯದಲ್ಲಿ, ಅವರು ಮುಂಬೈನಲ್ಲಿ ಹಲವಾರು ಆಸ್ತಿಗಳನ್ನು ಖರೀದಿಸಿದ್ದರು.
ಪ್ರಸ್ತುತ, ಅವರು ಎರಡು ಪೆಂಟ್ಹೌಸ್ಗಳನ್ನು ಮಾರಾಟ ಮಾಡಿದ್ದಾರೆ. ದೀಪಾವಳಿ ಆಚರಣೆಗಾಗಿ ಪ್ರಿಯಾಂಕಾ ಚೋಪ್ರಾ ಮುಂಬೈಗೆ ಬಂದಿದ್ದರು. ಅದೇ ಸಮಯದಲ್ಲಿ, ಅವರು ಮುಂಬೈನ ಅಂಧೇರಿಯಲ್ಲಿರುವ ಎರಡು ಪೆಂಟ್ಹೌಸ್ಗಳನ್ನು ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಅಭಿಷೇಕ್ ಚೌಬೆಗೆ ಮಾರಾಟ ಮಾಡಿದರು.
ವರದಿಗಳ ಪ್ರಕಾರ, ಇದಕ್ಕೆ ಪ್ರತಿಯಾಗಿ ಅವರು 6 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ಪ್ರಿಯಾಂಕಾ ಪ್ರತಿಯೊಂದು ಮನೆಯನ್ನು ಒಂದೊಂದಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಅನುಮಾನವನ್ನು ಹುಟ್ಟುಹಾಕಿದೆ.ಪ್ರಿಯಾಂಕಾ ಚೋಪ್ರಾ ಇಂಗ್ಲಿಷ್ ಸೀರಿಸ್ ಮತ್ತು ಚಲನಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.
ವೆಬ್ ಸೀರಿಸ್ 'ಸಿಟಾಡೆಲ್' ನಲ್ಲಿ ಅವರ ಅಭಿನಯವು ಪ್ರಶಂಸೆಗೆ ಪಾತ್ರವಾಗಿದೆ. ಪ್ರಸ್ತುತ, ಅವರು ಎರಡನೇ ಸೀಸನ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇನ್ನೂ ಕೆಲವು ಚಿತ್ರಗಳಲ್ಲಿ ನಟಿಸುತ್ತಿರುವ ಪ್ರಿಯಾಂಕ. ಹಿಂದಿ ಚಿತ್ರದಲ್ಲಿ ನಟಿಸಬೇಕಿತ್ತು, ಆದರೆ ಅದರಿಂದ ಪ್ರಿಯಾಂಕಾ ಚೋಪ್ರಾ ಹೊರನಡೆದಿದ್ದಾರೆ ಎನ್ನಲಾಗಿದೆ.