ಬೆಂಗಳೂರು, ನ 16 (DaijiworldNews/MR): ಕನ್ನಡದ ಯುವ ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ್ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ, ರಂಗಭೂಮಿ ಕಲಾವಿದೆ ಬೃಂದಾ ಜೊತೆ ಇಂದು ಅವರು ಸಪ್ತಪದಿ ತುಳಿದಿದ್ದಾರೆ.
ಹಲವು ಕಲಾವಿದರು, ಎರಡು ಕುಟುಂಬದ ಸದಸ್ಯರು ಮತ್ತು ಆಪ್ತರು ಮಾತ್ರ ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ.
ಮದುವೆ ವಿಚಾರವನ್ನು ವಾಸುಕಿ ಗುಟ್ಟಾಗಿಟಿದ್ದರು. ಅಚಾನಕ್ಕಾಗಿ ನಟಿ ತಾರಾ ಈ ವಿಷಯವನ್ನು ಹೇಳಿಕೊಂಡಿದ್ದರು.
ಟಗರು ಪಲ್ಯ ಸಿನಿಮಾದಲ್ಲಿ ವಾಸುಕಿ ಮದುವೆ ಆಗುವ ಗಂಡಿನ ಪಾತ್ರ ಮಾಡಿದ್ದರು. ಈ ಕುರಿತಾಗಿ ಮಾತನಾಡುತ್ತಾ ನಟಿ ತಾರಾ ಅತೀ ಶೀಘ್ರದಲ್ಲೇ ವಾಸುಕಿ ಮದುವೆ ಆಗುತ್ತಿರುವ ವಿಷಯವನ್ನು ಬಹಿರಂಗ ಪಡಿಸಿದ್ದರು.
ಹಲವು ತಿಂಗಳ ಹಿಂದೆಯೇ ವಾಸುಕಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ವಿಷಯ ಹರಿದಾಡುತ್ತಿತ್ತು. ಬಹುಕಾಲದ ಗೆಳೆತಿಯೊಂದಿಗೆ ಅವರು ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಅದೀಗ ನಿಜವಾಗಿದ್ದು, ಇಂದು ವಾಸುಕಿ ತಮ್ಮ ಬಹುಕಾಲದ ಗೆಳೆತಿಯೊಂದಿಗೆ ಸಪ್ತಪದಿ ತುಳಿದಿದ್ದಾರೆ.