ಮುಂಬೈ, ನ 15 (DaijiworldNews/PC): ದಕ್ಷಿಣದ ಖ್ಯಾತ ನಟಿ ಹಾಗೂ ಬಾಲಿವುಡ್ ನಟ ವಿಜಯ್ ವರ್ಮಾ ಜೋಡಿ ವಿವಿಧ ಕಡೆಗಳಿಗೆ ಒಟ್ಟೊಟ್ಟಾಗಿ ಹೋಗುತ್ತಿದ್ದು, ಹಲವಾರು ಸಿನೆಮಾಗಳಲ್ಲಿ ನಟಿಸಿದ್ದು ಇದೀಗ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.
ವಿಶೇಷ ಅಂದರೆ 2024 ಫೆಬ್ರವರಿ ಪ್ರೇಮಿಗಳ ದಿನದಂದು ಮದುವೆಯನ್ನು ಆಗಲಿದ್ದಾರೆ ಎಂದು ಸುದ್ದಿ ವೈರಲ್ ಆಗುತ್ತಿದೆ.ಮದುವೆ ವಿಚಾರವನ್ನು ಈ ಜೋಡಿ ಎಲ್ಲಿಯೂ ಅಧಿಕೃತವಾಗಿ ಹೇಳಿಕೆ ನೀಡದಿದ್ದರು, ಮಾಧ್ಯಮಗಳ ಜೊತೆ ವಿಜಯ್ ವರ್ಮಾ, ‘ನನಗೆ ತಮನ್ನಾ ಮೇಲೆ ಮತ್ತಷ್ಟು ಪ್ರೀತಿಯಾಗಿದೆ. ಹೆಚ್ಚೆಚ್ಚು ಪ್ರೀತಿ ಮೂಡುತ್ತಿದೆ’ ಎಂದು ಹೇಳುವ ಮೂಲಕ ತಮ್ಮಿಬ್ಬರ ನಡುವಿನ ಡೇಟಿಂಗ್ ಅನ್ನು ಖಚಿತ ಪಡಿಸಿದ್ದಾರೆ.
ನಂತರದ ದಿನಗಳಲ್ಲಿ ಡೇಟಿಂಗ್ ಕುರಿತು ಭಿನ್ನ ಪ್ರತಿಕ್ರಿಯೆ ನೀಡಿದ್ದರು.ತಮನ್ನಾ ವಿಜಯ್ ವರ್ಮಾ ಜೊತೆ ತಾವು ಲವ್ ಮಾಡುತ್ತಿರುವ ವಿಚಾರವನ್ನು ಒಪ್ಪಿಕೊಂಡಿದ್ದರು. ಈ ಜೋಡಿ ʻಲಸ್ಟ್ ಸ್ಟೋರಿ -2′ ಸಿನಿಮಾ ಸ ಮೂಲಕ ಸೆಟ್ನಲ್ಲಿ ಮೊದಲು ಭೇಟಿಯಾಗಿದ್ದರು. ಅಲ್ಲಿಂದ ಪ್ರಾರಂಭವಾದ ಇವರ ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು. ಸದ್ಯದಲ್ಲೇ ತಮ್ಮ ಅಭಿಮಾನಿಗಳಿಗೆ ಈ ಜೋಡಿ ಗುಡ್ನ್ಯೂಸ್ ನೀಡಲಿದ್ದಾರೆ.