ಬೆಂಗಳೂರು, ನ 14 (DaijiworldNews/RA): ಸದ್ಯ ಈಗ ಎಲ್ಲೆಲ್ಲೂ ಡೀಪ್ಫೇಕ್ ವಿಡಿಯೋಡಿಗಳದ್ದೆ ಸುದ್ದಿ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ,ಬಾಲಿವುಡ್ ನಟಿ ಕತ್ರಿನಾ ಕೈಫ್ ಸೇರಿದಂತೆ ಹಲವಾರು ಮಂದಿ ತಾರೆಗಳ ಡೀಪ್ಫೇಕ್ ವಿಡಿಯೋ ವೈರಲ್ ಆಗಿತ್ತು.
ಅರೆಬೆತ್ತಲಾಗಿದ್ದ ಮಹಿಳೆಯೊಬ್ಬರ ವೀಡಿಯೋಗೆ ನಟಿ ರಶ್ಮಿಕಾ ಅವರ ಮುಖ ಸೇರಿಸಿ ಡೀಪ್ಫೇಕ್ ವೀಡಿಯೋ ಮಾಡಲಾಗಿತ್ತು. ಸದ್ಯ ರಶ್ಮಿಕಾ ಮಂದಣ್ಣ ಇನ್ನೊಂದು ಡೀಪ್ಫೇಕ್ ವಿಡಿಯೋ ವೈರಲ್ ಆಗಿದ್ದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದು ಜನ ಸಾಮಾನ್ಯರ ಪಾಡು ಎನು...? ಜನ ಪ್ರಶ್ನೆ ಮಾಡುತ್ತಿದ್ದಾರೆ.
ಇನ್ನು ಈ ಹಿಂದೆಯೂ ಇವರ ಇಂಥದ್ದೇ ವಿಡಿಯೋ ಶೇರ್ ಆಗಿ ಸಾಕಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಡಿಯೋ ಕುರಿತು ದೂರು ದಾಖಲಾಗಿದ್ದರೂ, ಕಿಡಿಗೇಡಿಗಳು ಅಂಜದೇ ಮತ್ತೊಂದು ಡೀಪ್ಫೇಕ್ ವಿಡಿಯೋವನ್ನು ಹಂಚಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.
ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ಎಐ-ರಚಿಸಿದ ವೀಡಿಯೋಗೆ ಸಂಬಂಧಿಸಿದಂತೆ ದೆಹಲಿ ಕಳೆದ ಶುಕ್ರವಾರ ವಿಶೇಷ ಸೆಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದು ತನಿಖೆ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ವೀಡಿಯೋ ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ ಎಂಬ ಮಾಧ್ಯಮ ವರದಿಗಳ ಕುರಿತು ದೆಹಲಿ ಮಹಿಳಾ ಆಯೋಗವು ಸುಮೊಟೊ ಅರಿವು ತೆಗೆದುಕೊಂಡಿದೆ.ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾವುದೇ ಬಂಧನವಾಗಿಲ್ಲ. ನವೆಂಬರ್ 17 ರೊಳಗೆ ಆರೋಪಿಗಳ ವಿವರಗಳೊಂದಿಗೆ ಎಫ್ಐಆರ್ ಪ್ರತಿ ನೀಡಬೇಕು. ಇದು ಅತ್ಯಂತ ಗಂಭೀರವಾದ ವಿಷಯ ಎಂದು ಆಯೋಗ ಹೇಳಿದೆ.