ಬೆಂಗಳೂರು, ಎ16(Daijiworld News/SS): ಸ್ಯಾಂಡಲ್ವುಡ್ನ ಮನಸಾರೆ ಬೆಡಗಿ ಐಂದ್ರಿತಾ ರೈಗೆ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿಕೊಂಡು ಪರಿಸರ ಪ್ರೇಮ ಮೆರೆದಿದ್ದಾರೆ.
33ನೇ ವಸಂತಕ್ಕೆ ಕಾಲಿಟ್ಟಿರುವ ಐಂದ್ರಿತಾ ಮದುವೆ ಬಳಿಕ ಮೊದಲ ಹುಟ್ಟುಹಬ್ಬ ಆಚರಿಸಿದ್ದಾರೆ. ಪತಿ ಹಾಗೂ ನಟ ದಿಗಂತ ಜೊತೆ ಐಂದ್ರಿತಾ ರೈ ಗಿಡ ನೆಡುವ ಮೂಲಕ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ.
ತಮ್ಮ ಹುಟ್ಟುಹಬ್ಬದಂದು ಬೆಂಗಳೂರಿನ ಬಾಗಲಕುಂಟೆಯಲ್ಲಿರುವ ಸೌಂದರ್ಯ ಏಜುಕೇಷನ್ ಟ್ರಸ್ಟ್ನಲ್ಲಿ ಕಾಲೇಜ್ ಕ್ಯಾಂಪಸ್ನಲ್ಲಿ 40 ಗಿಡ ನೆಟ್ಟು ಪರಿಸರ ಕಾಳಜಿ ತೋರಿದ್ದಾರೆ.
ಐಂದ್ರಿತಾ ರೈ ಪರಿಸರ ಪ್ರೇಮಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.