ನವದೆಹಲಿ, ನ 11 (DaijiworldNews/PC) : ಇದೀಗ ದೇಶದಲ್ಲಿ ಡೀಪ್ಫೇಕ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮೊನ್ನೆಯಷ್ಟೇ ನಟಿ ರಶ್ಮಿಕಾ ಮಂದಣ್ಣ ಅವರು ಡೀಪ್ಫೇಕ್ ವಿಡಿಯೋ ದೆಶದಲ್ಲಿಯೇ ಸಂಚಲನ ಮೂಡಿಸಿತ್ತು. ಬಳಿಕ ಕತ್ರಿನಾ ಕೈಫ್ ಅವರ ಡೀಪ್ಫೇಕ್ ಮಾಡಲಾಯಿತು. ಇದೀಗ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಮತ್ತು ಕ್ರಿಕೆಟಿಗ ಶುಭಮನ್ ಗಿಲ್ ಅವರ ಡೀಪ್ಫೇಕ್ ಫೋಟೋವೊಂದು ವೈರಲ್ ಆಗಿದೆ.
ಇಬ್ಬರೂ ಜೊತೆಗಿರುವ ಫೋಟೋವನ್ನು ಡೀಪ್ಫೇಕ್ ಮಾಡಿ ಇಬ್ಬರೂ ಡೇಟ್ ಮಾಡುತ್ತಿದ್ದಾರೆ ಎಂದು ಸುದ್ದಿ ಹರಿಬಿಡಲಾಗಿದೆ.
ಶುಭಮನ್ ಮತ್ತು ಸಾರಾ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಹರಿದಾಡುತ್ತಿತ್ತು. ಆದರೆ ಎಲ್ಲಿಯೂ ಬಹಿರಂಗವಾಗಿ ಹೇಳಿಕೆ ನೀಡಲ್ಲ. ಆದರೆ ಇದೀಗ ಅವರಿಬ್ಬರ ಜೊತೆಗಿನ ಫೋಟೋವನ್ನು ನಕಲು ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿದೆ.
ಈಗಾಗಲೇ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ಎಐ-ರಚಿಸಿದ ವೀಡಿಯೋಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಶುಕ್ರವಾರ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.