ಮುಂಬೈ, ನ.6 (DaijiworldNews/SK): ನ್ಯಾಷನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ ಅವರು ಎಲಿವೇಟರ್ ಗೆ ಬರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಕುರಿತಂತೆ ಅನೇಕ ಕಲಾವಿದರು,ರಾಜಕಾರಣಿಗಳು ಮತ್ತು ರಶ್ಮಿಕಾ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಇದೀಗ ನಟಿ ರಶ್ಮಿಕಾ ಮಂದಣ್ಣ ಅವರ ಮುಖಕ್ಕೆ ಮಾರ್ಫಿಂಗ್ ಬಳಸಿರೋ ಈ ವಿಡಿಯೋ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಇದೊಂದು AI ಮೂಲಕ ಡೀಪ್ ಫೇಕ್ ತಂತ್ರಜ್ಞಾನದಿಂದ ತಯಾರಿಸಿರೋ ವಿಡಿಯೋ ಅಪಾಯಕಾರಿ ಎಂದು ಆತಂಕ ಎದುರಾಗಿದೆ.
ನೋಡೋದಕ್ಕೆ ರಶ್ಮಿಕಾ ಮಂದಣ್ಣ ಅವರ ಹಾಗೇ ವೀಡಿಯೋವನ್ನು ಬಿಂಬಿಸಲಾಗಿದ್ದು, ಡೀಪ್ ಫೇಕ್ ನ ಇತ್ತೀಚಿನ ಪ್ರಯೋಗಕ್ಕೆ ನಟಿ ರಶ್ಮಿಕಾ ಮಂದಣ್ಣ ಮೊದಲ ಬಾರಿಕೆ ತುತ್ತಾಗಿದ್ದಾರೆ. ಸಾಮಾಜಿಕ ಮಾಧ್ಯಮಾದಲ್ಲಿ ಈ ವಿಡಿಯೋ ಮಿಲಿಯನ್ ಗಟ್ಟಲೇ ವೀವ್ಸ್ ಕೂಡ ಪಡೆದುಕೊಂಡಿದೆ.
ಈ ವಿಡಿಯೋವನ್ನು ಅಕ್ಟೋಬರ್ 8 ರಂದು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಜರಾ ಪಟೇಲ್ ಎಂಬ ಮಹಿಳೆ ಕಾಣಿಸಿಕೊಂಡಿದ್ದಾರೆ. ಆದರೆ ಜರಾ ಪಟೇಲ್ ಬದಲು ರಶ್ಮಿಕಾ ಮಂದನಾ ಅವರ ಮುಖವನ್ನು ಡೀಪ್ಫೇಕ್ ತಂತ್ರಜ್ಞಾನದ ಮೂಲಕ ಬದಲಾಯಿಸಲಾಗಿದೆ. ಈ ರೀತಿಯ ನಕಲಿ ವೀಡಿಯೋವನ್ನು ಯಾರು ಸೃಷ್ಟಿಸಿದ್ದಾರೆ ಎಂಬುದು ನಿಗೂಢವಾಗಿಯೇ ಉಳಿದಿದೆ.
ಇನ್ನೂ ಅಭಿಷೇಕ್ ಕುಮಾರ್ ಎಂಬ ಪತ್ರಕರ್ತರು ಎಕ್ಸ್ ನಲ್ಲಿ ಈ ವಿಡೀಯೋದ ವಿರುದ್ದ ಧ್ವನಿ ಎತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ನಕಲಿ ವಿಷಯದ ಹರಡಿವಿಕೆಯನ್ನು ತಡೆಯಲು ಹೊಸ ಕಾನುನೂ ಮತ್ತು ನಿಯಂತ್ರಣ ಕ್ರಮಗಳನ್ನು ತೆಗೆದು ಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇದರ ಜೊತೆಗೆ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ಸಹ ವಿಡಿಯೋ ಹಂಚಿಕೊಂಡು ವಿಷಾದ ವ್ಯಕ್ತಪಡಿಸಿದ್ದಾರೆ. ಈ ಸೈಬರ್ ಅಪರಾಧಕ್ಕೆ ಸೂಕ್ತವಾದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಟ್ವೀಟ್ ಮಾಡಿದ್ದಾರೆ.