ಮುಂಬೈ, 5(DaijiworldNews/PC) : ತಪ್ಪನ್ನು ರಾಜ ಮಾಡಿದರೂ ಸೇವಕ ಮಾಡಿದರೂ ತಪ್ಪು ತಪ್ಪೇ ಎಂಬಂತೆ ಇಬ್ಬರು ಸಿನಿಮಾ ನಟರು ಕಾರ್ಯಕ್ರಮವೊಂದರಲ್ಲಿ ಜೂಜಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಚಿತ್ರಗಳಿಗೆ ಹಲವರು ಟ್ರೋಲ್ ಮಾಡುತ್ತಿದ್ದಾರೆ.
ಟಾಲಿವುಡ್ ನಟರಾದ ಮಹೇಶ್ ಬಾಬು ಹಾಗೂ ವಿಕ್ಟರಿ ವೆಂಕಟೇಶ್ ಅವರುಗಳು ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಇಸ್ಪೀಟು ಆಡುತ್ತಿದ್ದು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.. ಕೇವಲ ಆಟ ಆಡಿದ್ದರೆ ಏನೂ ಸಮಸ್ಯೆ ಅಗುತ್ತಿರಲಿಲ್ಲ. ಆದರೆ ಈ ನಟರು ಹಣ ಬೆಟ್ಟಿಂಗ್ ಮೂಲಕ ಇಸ್ಪೀಟ್ ಆಟ ಆಡಿದ್ದಾರೆ. ಟೇಬಲ್ ಮೇಲೆ ಪಕ್ಕ-ಪಕ್ಕ ಕುಳಿತುಕೊಂಡು ಇಸ್ಪೀಟ್ ಆಡುತ್ತಿರುವ ಫೋಟೋ ವೈರಲ್ ಆಗಿದೆ.
ಇದಕ್ಕೆ ಅಭಿಮಾನಿಗಳಿಂದ ವಿಭಿನ್ನ ರೀತಿಯಲ್ಲಿ ಕಮೆಂಟ್ ಬರೆದಿದ್ದಾರೆ. ನಟರು ಇಸ್ಪೀಟು ಆಡಲು ಅಲ್ಲಿಗೆ ಹೋಗಲಿಲ್ಲ ಬದಲಾಗಿ ಕಾರ್ಯಕ್ರಮ ವೊಂದರ ಉದ್ಗಾಟನೆಗೆ ಹೋಗಿದ್ದಾರೆ.
ಇಬ್ಬರೂ ಒಳ್ಳೆಯ ವ್ಯಕ್ತಿಗಳಾಗಿದ್ದು ಕಾನೂನಿನ ವಿರುದ್ದವಾದ ಚಟುವಟಿಕೆಗಳಿಂದ ದೂರವೇ ಇರುತ್ತಾರೆ ಎಂದು ಕೆಲ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ನಟರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಹೈದರಾಬಾದ್ ಪೊಲೀಸರು ಸ್ವಯಂ ಪ್ರೇರಿತವಾಗಿ ಈ ಇಬ್ಬರೂ ನಟರ ವಿರುದ್ಧ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.