ಮುಂಬೈ,ನ 03 (DaijiworldNews/PC): ಬಾಲಿವುಡ್ ನಟಿ ಬಿಪಾಶ ಬಸು ತಮ್ಮ ಮಗಳ ಮುದ್ದಾದ ವಿಡಿಯೊಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ತಾಯ್ತನದ ಖುಷಿಯನ್ನು ಅನುಭವಿಸುತ್ತಿರುವ ಬಾಲಿವುಡ್ ನಟ ಬಿಪಾಶಾ ಬಸು ಮಗಳು ದೇವಿಯೊಂದಿಗೆ ಕಳೆಯುತ್ತಿರುವ ಸಂತೋಷದ ಕ್ಷಣಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ದೇವಿ, ಗೊಂಬೆಯೊಂದನ್ನು ಕೈಯಲ್ಲಿ ಹಿಡಿದುಕೊಂಡು ಕಚ್ಚುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ "ಟೀಥಿಂಗ್ ಬೈಟ್ ಬೈಟ್ ಬೈಟ್.." ಎಂಬ ಕ್ಯಾಪ್ಶನ್ ಕೊಟ್ಟಿದ್ದಾರೆ.
ಕರಣ್ ಸಿಂಗ್ ಗ್ರೋವರ್ ಮತ್ತು ಬಿಪಾಶಾ ಇಬ್ಬರೂ 2016ರಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು. 6 ವರ್ಷಗಳ ಬಳಿಕ ಬಿಪಾಶಾ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಆದರೆ ದೇವಿಯ ಹೃದಯದಲ್ಲಿ ರಂದ್ರವಿದ್ದ ಕಾರಣ ಆಕೆಗೆ ಮೂರು ತಿಂಗಳಿದ್ದಾಗ ತೆರೆದ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿತ್ತು.