ತಿರುವನಂತಪುರಂ, ನ.1 (DaijiworldNews/AA/AK): ಮಲಯಾಳಂ ಖ್ಯಾತ ಕಿರುತೆರೆ ನಟಿ ಡಾ.ಪ್ರಿಯಾ ಹೃದಯಾಘಾತದಿಂದ ಅಕ್ಟೋಬರ್ 31 ರಂದು ಮೃತಪಟ್ಟಿದ್ದಾರೆ.
ಪ್ರಸ್ತುತ ನಟಿ ಡಾ.ಪ್ರಿಯಾ ಅವರು ಎಂಟು ತಿಂಗಳ ಗರ್ಭಿಣಿಯಾಗಿದ್ದು, ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದ್ದ ವೇಳೆಯೇ ಹೃದಯ ಸ್ತಂಭನವಾಗಿದೆ. ಇದೀಗ ನಟಿಯ ಮಗುವನ್ನು ಐಸಿಯುನಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.
ಧಾರಾವಾಹಿಯಲ್ಲಿ ನಟಿಸುವುದರ ಜೊತೆಗೆ ವೃತ್ತಿಯಲ್ಲಿ ವೈದ್ಯೆಯಾಗಿದ್ದ ಡಾ. ಪ್ರಿಯಾ ಅವರು ಮದುವೆಯ ಬಳಿಕ ನಟನೆ ಯಿಂದ ದೂರ ಉಳಿದಿದ್ದರು.
ನಟಿ ಡಾ.ಪ್ರಿಯಾ ಅವರು ಎಂಡಿ ವ್ಯಾಸಂಗ ಮಾಡುತ್ತಿದ್ದು, ತಿರುವನಂತಪುರಂನ ಪಿಆರ್ಎಸ್ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ವರದಿಗಳಿಂದ ತಿಳಿದುಬಂದಿದೆ.