ಮುಂಬೈ, ಅ. 31 (DaijiworldNews/AK): ಕನ್ನಡ ಸೂಪರ್ ಹಿಟ್ ಸಿನಿಮಾ ಹೆಬ್ಬುಲಿಯ ನಾಯಕಿ ಅಮಲಾ ಪೌಲ್ ಮತ್ತೊಂದು ಮದುವೆಗೆ ರೆಡಿಯಾಗಿದ್ದಾರೆ. ಅಮಲಾ ಅವರ ಹುಟ್ಟು ಹಬ್ಬದ ದಿನದಂದೇ ಬಾಯ್ ಫ್ರೆಂಡ್ ವಿಶೇಷವಾದ ಸನ್ನಿವೇಶವೊಂದನ್ನು ಸೃಷ್ಟಿ ಮಾಡಿ ಅಮಲಾ ಕೈಗೆ ರಿಂಗ್ ತೊಡಿಸಿದ್ದಾರೆ.
ದಕ್ಷಿಣ ಭಾರತದ ಖ್ಯಾತಿ ನಟಿ ಆಗಿರುವ ಅಮಲಾ ಪೌಲ್ ವಿವಾದಗಳಿಂದಲೇ ಸುದ್ದಿ ಆದವರು. ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.
2014ರಲ್ಲಿ ತಮಿಳು ನಿರ್ದೇಶಕ ವಿಜಯ್ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ ಆ ಮದುವೆಯಾದ ಮೂರೇ ಮೂರು ವರ್ಷಕ್ಕೆ ಜೀವನ ಮುರಿದು ಬಿತ್ತು.
ಆನಂತರ ಈ ನಟಿಯ ಹೆಸರು ಹಲವಾರು ನಟ, ನಿರ್ದೇಶಕರ ಹೆಸರಿನೊಂದಿಗೆ ಕೇಳಿ ಬಂತು. ಆದರೆ, ಯಾವತ್ತೂ ಅದಕ್ಕೆಲ್ಲ ಪ್ರತಿಕ್ರಿಯಿಸಿಲ್ಲ. ಇದೀಗ ಬಾಯ್ ಫ್ರೆಂಡ್ ಜೊತೆಗಿನ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಬಾಯ್ ಫ್ರೆಂಡ್ ಮಾಡಿರೋ ಪ್ರಪೋಸ್ಗೆ ಅಮಲಾ ಒಪ್ಪಿಕೊಂಡಿದ್ದಾರೆ.
ಹಲುವು ದಿನಗಳಿಂದ ಜಗತ್ ದೇಸಾಯಿ ಜೊತೆ ಅಮಲಾ ಡೇಟಿಂಗ್ ನಲ್ಲಿದ್ದರು ಹೀಗಾಗಿ ಅಮಲಾ ಅವರ ಹುಟ್ಟು ಹಬ್ಬಕ್ಕೆ ಹೋಟೆಲ್ನಲ್ಲಿ ಸಿದ್ಧತೆ ಮಾಡಿದ್ದಾರೆ. ಜಗತ್ ದೇಸಾಯಿ ಅವರು ನೃತ್ಯ ಮಾಡುತ್ತಲೇ ನಟಿಗೆ ಪ್ರಪೋಸ್ ಮಾಡಿದ್ದಾರೆ. ಇದಕ್ಕೆ ಅಮಲಾ ಕೂಡ ಖುಷಿಯಿಂದ ಬಾಯ್ ಫ್ರೆಂಡ್ ಕಿಸ್ ಮಾಡಿ ಉಂಗುರು ತೊಡಿಸಿದ್ದಾರೆ.