ಮುಂಬೈ, ಅ 30 (DaijiworldNews/AK): ಕಾಲಿವುಡ್ ನಟ ಸಿದ್ಧಾರ್ಥ್- ಅದಿತಿ ರಾವ್ ಹೈದರಿ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದರು. ಆದರೆ ಸಿದ್ಧಾರ್ಥ್ ಪ್ರೀತಿ ಬಗ್ಗೆ ಎಲ್ಲೂ ಗುಟ್ಟು ಬಿಟ್ಟು ಕೊಟ್ಟಿಲ್ಲ. ಆದರೆ ಈಗ ಅದಿತಿ ಫೋಟೋ ಶೇರ್ ಮಾಡಿ ವಿಶೇಷ ಸಾಲುಗಳನ್ನ ಬರೆದುಕೊಂಡು ತಮ್ಮ ಪಾರ್ಟ್ನರ್ ಎಂದು ಹೇಳಿಕೊಂಡಿದ್ದಾರೆ.
ಅ.28ರಂದು ಅದಿತಿ ರಾವ್ ಹುಟ್ಟುಹಬ್ಬವಾಗಿತ್ತು. ಸಿದ್ಧಾರ್ಥ್ ವಿಶೇಷವಾಗಿ ಶುಭಕೋರುವ ಮೂಲಕ ಪಾರ್ಟ್ನರ್ ಎಂದು ನಟ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ. ಸಿದ್ಧಾರ್ಥ್ ಪೋಸ್ಟ್ಗೆ ಅದಿತಿ ಕೂಡ, ಧನ್ಯವಾದ ತಿಳಿಸಿದ್ದಾರೆ.ಅಭಿಮಾನಿಗಳು ಆದಷ್ಟು ಬೇಗ ಮದುವೆಯಾಗುವಂತೆ ಹಾರೈಸಿದ್ದಾರೆ.ಹಲವು ಕಾರ್ಯಕ್ರಮಗಳಲ್ಲಿ ಸಿದ್ಧಾರ್ಥ್- ಅದಿತಿ ಜೊತೆಯಾಗಿ ಕಾಣಿಸಿಕೊಂಡಿದ್ದರು.
ಅದಿತಿ ಅವರು ಈ ಹಿಂದೆ ಸತ್ಯದೀಪ್ ಮಿಶ್ರಾ ಜೊತೆ ಮದುವೆಯಾಗಿದ್ರು. ಬಳಿಕ 2013ರಲ್ಲಿ ಡಿವೋರ್ಸ್ ಪಡೆದರು. ಸಿದ್ಧಾರ್ಥ್ ಕೂಡ 2003ರಲ್ಲಿ ಮೇಘನಾ ಎಂಬುವವರನ್ನ ಮದುವೆಯಾಗಿದ್ದರು. 2007ರಲ್ಲಿ ಸಿದ್ಧಾರ್ಥ್-ಮೇಘನಾ ಡಿವೋರ್ಸ್ ಪಡೆದರು.