ಮುಂಬೈ, ಅ 29 (DaijiworldNews/HR): ಭಾರತದ ಅತ್ಯಂತ ಶ್ರೀಮಂತ ನಟಿಯರಲ್ಲಿ ಪ್ರಿಯಾಂಕಾ ಚೋಪ್ರಾ ಕೂಡ ಒಬ್ಬರಾಗಿದ್ದು, ಇದೀಗ ನಟಿ ತಮ್ಮ ಕೈಗಡಿಯಾರದ ಮೂಲಕ ಸದ್ದು ಮಾಡಿದ್ದಾರೆ.
ಜಿಯೋ ಮಾಮಿ ಸಿನಿಮಾ ಉತ್ಸವಕ್ಕೆ ಆಗಮಿಸಿದ್ದ ನಟಿ ಪ್ರಿಯಾಂಕಾ ಚೋಪ್ರಾ ರೆಡ್ ಕಾರ್ಪೆಟ್ ನಲ್ಲಿ ಗಮನ ಸೆಳೆದಿದ್ದು, ಈ ವೇಳೆ ಪ್ರಿಯಾಂಕಾ ಧರಿಸಿದ್ದ ಡಿಸೈನರ್ ಬಟ್ಟೆಯ ಜೊತೆಗೆ ಪ್ರಿಯಾಂಕಾ ಧರಿಸಿದ್ದ ಕೈಗಡಿಯಾರ ಸಹ ಸಖತ್ ಗಮನ ಸೆಳೆದಿದೆ.
ಇನ್ನು ನಟಿ ಪ್ರಿಯಾಂಕಾ ಧರಿಸಿದ್ದ ಕೈಗಡಿಯಾರದ ಬೆಲೆ ಕೋಟಿಗಳಲ್ಲಿದೆ ಎನ್ನಲಾಗಿದ್ದು, ಬಲ್ಗಾರಿ ಬ್ರ್ಯಾಂಡ್ನ ವಾಚ್ ಇದಾಗಿದೆ.