ಮುಂಬೈ, ಅ.27 (DaijiworldNews/AK): ಮೆಗಾ ಫ್ಯಾಮಿಲಿಯಲ್ಲಿ ಮದುವೆಯ ಸಂಭ್ರಮ ಶುರುವಾಗಲಿದೆ. ನಾಗಬಾಬು ಪುತ್ರ, ನಟ ವರುಣ್ ತೇಜ್ ಅವರು ನಟಿ ಲಾವಣ್ಯ ತ್ರಿಪಾಠಿ ಅವರನ್ನು ವರಿಸಲಿದ್ದಾರೆ.
ಕೆಲ ತಿಂಗಳ ಹಿಂದೆ ಎರಡೂ ಕುಟುಂಬ ಸಮ್ಮುಖದಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. ಈಗ ಮೆಗಾ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆಮಾಡಿದೆ. ವರುಣ್ ಮತ್ತು ಲಾವಣ್ಯ ಅವರ ಮದುವೆಯ ಆಮಂತ್ರಣದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮದುವೆ ಕಾರ್ಡ್ನಲ್ಲಿ ಚಿರಂಜೀವಿ, ಪವನ್ ಕಲ್ಯಾಣ್ ಮತ್ತು ರಾಮ್ ಚರಣ್ ಮೊದಲಾದವರ ಹೆಸರನ್ನು ಮುದ್ರಿಸಲಾಗಿದೆ.
ಅಕ್ಟೋಬರ್ 30ರಿಂದ ವರುಣ್ ತೇಜ್ ಹಾಗೂ ಲಾವಣ್ಯಾ ವಿವಾಹ ಸಮಾರಂಭ ಆರಂಬವಗಲಿದ್ದು, ನವೆಂಬರ್ 1ರಂದು ಇಟಲಿಯಲ್ಲಿ ವಿವಾಹವಾಗಲಿದ್ದಾರೆ. . ರಾಮ್ ಚರಣ್ ಮತ್ತು ಉಪಾಸನಾ ಈಗಾಗಲೇ ಇಟಲಿಗೆ ತೆರಳಿ ಮದುವೆಯ ಸಿದ್ಧತೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ. ಇಂದು ಮೆಗಾ ಮತ್ತು ಅಲ್ಲು ಕುಟುಂಬ ಸದಸ್ಯರು ಇಟಲಿಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ.
ಅಕ್ಟೋಬರ್ 30ರಂದು ಕಾಕ್ಟೇಲ್ ಪಾರ್ಟಿಯೊಂದಿಗೆ ಮದುವೆ ಕಾರ್ಯ ಆರಂಭ ಆಗಲಿದೆ. ಆ ಬಳಿಕ ಹಳದಿ ಮತ್ತು ಮೆಹಂದಿ ಸಮಾರಂಭಗಳು ನಡೆಯಲಿವೆ. ನವೆಂಬರ್ 1ರಂದು ಅದ್ದೂರಿಯಾಗಿ ಮದುವೆ ಜರುಗಲಿದೆ. ನವೆಂಬರ್ 5ರಂದು ಹೈದರಾಬಾದ್ನಲ್ಲಿ ಆರತಕ್ಷತೆ ಆಯೋಜಿಸಲಾಗಿದೆ. ಸೆಲೆಬ್ರಿಟಿಗಳು ಮತ್ತು ಆಪ್ತರು ಇದರಲ್ಲಿ ಭಾಗಿಯಾಗಲಿದ್ದಾರೆ.