ಮುಂಬೈ, ಅ.22(DaijiworldNews/AK):ಬಾಲಿವುಡ್ನ ಸ್ಟಾರ್ ನಟಿ ಕಂಗನಾ ರಣಾವತ್ ಅವರಿಗೆ ಬಾಲಿವುಡ್ನಲ್ಲಿ ಬಹುತೇಕರನ್ನು ಕಂಡರೆ ಅಷ್ಟಕಷ್ಟೇ. ಅವರು ಬಹಳಷ್ಟು ಮಂದಿ ಜೊತೆ ಮುನಿಸಿಕೊಂಡಿದ್ದರು. ಕಂಗನಾಗೆ ಸಲ್ಮಾನ್ ಖಾನ್ ನನ್ನು ಕಂಡರು ಆಗುತ್ತೀರಲಿಲ್ಲ. ಆದರೆ ಇತ್ತೀಚೆಗೆ ಅವರು ಸಲ್ಲು ಜೊತೆ ಫ್ರೆಂಡ್ಶಿಪ್ ಬೆಳೆಸಿಕೊಂಡಿದ್ದಾರೆ.
ಕಂಗನಾ ಜೊತೆ ಸಲ್ಮಾನ್ ಖಾನ್ ಫ್ಲರ್ಟ್ ಮಾಡಿದ್ದಾರೆ. ಇದಕ್ಕೆ ನಾಚುತ್ತಲೇ ಉತ್ತರ ನೀಡಿದ್ದಾರೆ ಕಂಗನಾ. ಸದ್ಯ, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಂಗನಾ ರಣಾವತ್ ನಟನೆಯ ಧಾಕಡ್ಸಿನಿಮಾ ರಿಲೀಸ್ಗೂ ಮೊದಲು ಸಲ್ಮಾನ್ ಖಾನ್ ಅವರು ಈ ಚಿತ್ರವನ್ನು ಬೆಂಬಲಿಸಿದ್ದರು. ಈ ಸಿನಿಮಾ ನೋಡುವಂತೆ ಅವರು ಕೋರಿದ್ದರು. ಇದು ಕಂಗನಾ ಖುಷಿಗೆ ಕಾರಣ ಆಗಿತ್ತು. ಇದಾದ ಬಳಿಕ ಸಲ್ಮಾನ್ ಖಾನ್ ಹಾಗೂ ಕಂಗನಾ ರಣಾವತ್ ಅವರ ಮಧ್ಯೆ ಗೆಳೆತನ ಮೂಡಿದೆ.
ಈ ಬಿಗ್ ಬಾಸ್ ಹಿಂದಿ ಸೀಸನ್ ವೇದಿಕೆಗೆ ಕಂಗನಾ ರಣಾವತ್ ಅವರ ಆಗಮನ ಆಗಿದೆ. ಎಲ್ಲರಿಗೂ ನಮಸ್ಕಾರ ಎನ್ನುತ್ತಾ ವೇದಿಕೆಗೆ ಬಂದಿದ್ದಾರೆ ಕಂಗನಾ ರಣಾವತ್. ಅವರ ಹಿಂದೆ ಸಲ್ಮಾನ್ ಖಾನ್ ಕೂಡ ಬಂದಿದ್ದಾರೆ. ಹೇಗಿದ್ದೀರಿ ಎಂದು ಸಲ್ಮಾನ್ ಖಾನ್ಗೆ ಕಂಗನಾ ಕೇಳಿದ್ದಾರೆ. ‘ನಾನು ಆರಾಮಾಗಿದ್ದೇನೆ’ ಎಂದು ಸಲ್ಮಾನ್ ಖಾನ್ ಉತ್ತರಿಸಿದ್ದಾರೆ. ನಂತರ ಇಬ್ಬರೂ ಪ್ರೀತಿಯಿಂದ ಹಗ್ ಮಾಡಿಕೊಂಡಿದ್ದಾರೆ.
ಛೇಡಿಸಿದರೆ ಬಿಡಲ್ಲ ಎಂದು ಸಲ್ಲುಗೆ ಕಂಗನಾ ಹೇಳಿದ್ದರೆ. ನಿಮ್ಮ ಗೆಳೆಯನೇ ನಿಮ್ಮ ಜೊತೆ ಫ್ಲರ್ಟ್ ಮಾಡಿದರೆ ಏನು ಮಾಡುತ್ತೀರಿ’ ಎಂದು ಸಲ್ಮಾನ್ ಖಾನ್ ಅವರು ಪ್ರಶ್ನೆ ಕೇಳುತ್ತಾರೆ. ನಿಮ್ಮಂತೆ ಹುಡುಗ ಹ್ಯಾಂಡ್ಸಮ್ ಆಗಿದ್ದರೆ ಖುಷಿ ಆಗುತ್ತದೆ ಎಂದರು ಕಂಗನಾ.
ಸಲ್ಮಾನ್ ಖಾನ್ ಅವರು ಕಂಗನಾ ಅಂದವನ್ನು ಹೊಗಳಿದ್ದಾರೆ. ಅಲ್ಲದೆ, ಇಬ್ಬರೂ ಡ್ಯಾನ್ಸ್ ಮಾಡಿ ರಂಜಿಸಿದರು.