ಮುಂಬೈ, ಅ 19 (DaijiworldNews/AK):ದಕ್ಷಿಣ ಭಾರತದಲ್ಲಿ ಹೆಚ್ಚು ಗುರುತಿಸಿಕೊಂಡ ನಟಿ ನಿತ್ಯಾ ಮೆನನ್. ಕನ್ನಡ, ಮಲಯಾಳಂ ಸೇರಿ ಹಲವು ಭಾಷೆಗಳನ್ನು ಸಲೀಸಾಗಿ ಮಾಡುತ್ತಾರೆ ನಟಿ. ಈಗ ನಿತ್ಯಾ ಮೆನನ್ ಅವರು ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ.
ಸೆಲೆಬ್ರಿಟಿಗಳ ವೈಯಕ್ತಿಕ ವಿಚಾರದಲ್ಲಿ ಆಗಾಗ ಗಾಸಿಫ್, ಚರ್ಚೆ ಆಗುತ್ತಾನೆ ಇರುತ್ತದೆ. ಇದೀಗ 33ವರ್ಷದ ನಿತ್ಯಮೆನನ್ಗೂ ಮದುವೆ ಆಗುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿದೆ.
ಅದಕ್ಕೆ ಉತ್ತರಿಸಿದ ಮೆನನ್ , ನಾನು ಎಲ್ಲವನ್ನೂ ಮೀರಿ ಬೆಳೆದಿದ್ದೇ. ನಾನು ಏನು ಮಾಡಬೇಕು ಎಂಬುದನ್ನು ಮತ್ತೊಬ್ಬರು ಹೇಳಬೇಕು ಎಂದು ನಾನು ಭಾವಿಸುವುದಿಲ್ಲ. ನನ್ನ ಪಾಲಕರು ಈ ವಿಚಾರದಲ್ಲಿ ನನ್ನನ್ನು ಅರ್ಥ ಮಾಡಿಕೊಂಡಿದ್ದಾರೆ. ನನಗೆ ಅವರು ಸ್ವಾತಂತ್ರ್ಯ ನೀಡಿದ್ದಾರೆ. ಸ್ವಾತಂತ್ರ್ಯ ಇಲ್ಲದೆ ನನಗೆ ಬದುಕೋಕೆ ಆಗಲ್ಲ. ಅದು ಅವರಿಗೆ ಗೊತ್ತುಎಂದಿದ್ದಾರೆ
ನನ್ನ ಅಜ್ಜಿ ಬದುಕಿದ್ದಾಗ ಮದುವೆಯಾಗಬೇಕೆಂದು ಒತ್ತಡವಿತ್ತು. ನಾನು ಜನಪ್ರಿಯೆ ನಟಿ ಎಂಬ ಬಗ್ಗೆ ಅವರು ತಲೆಕೆಡಿಸಿಕೊಂಡಿರಲಿಲ್ಲ. ನೀನು ಯಾಕೆ ಮದುವೆಯಾಗಬಾರದು ಎಂದು ಅಜ್ಜಿ ನನಗೆ ಕೇಳುತ್ತಲೇ ಇದ್ದರು. ಅವರು ಇಂದು ನಮ್ಮೊಂದಿಗೆ ಇಲ್ಲ. ಅವರ ಬಿಟ್ಟು ಈ ವಿಚಾರದಲ್ಲಿ ಇನ್ಯಾರೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎನ್ನುತ್ತಾರೆ ನಿತ್ಯಾ.
30 ವರ್ಷ ದಾಟಿದಾಗ ಮದುವೆ ಬಗ್ಗೆ ಒತ್ತಡ ಬರುತ್ತದೆ. ಸಮಾಜ ಅಂದುಕೊಂಡ ವಿಚಾರವನ್ನು ಪಾಲಿಸಿದರೆ ಒಳ್ಳೆಯವರು ಎನಿಸಿಕೊಳ್ಳುತ್ತೀರಿ. ಇಲ್ಲವಾದರೆ ನಿಮಗೆ ಕೆಟ್ಟವರು ಎನ್ನುವ ಪಟ್ಟ ಸಿಗುತ್ತದೆ ಎಂದಿದ್ದಾರೆ.