ಮುಂಬೈ, (DaijiworldNews/AA/AK): 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉತ್ತಮ ನಟಿ ನಟಿ ಆಲಿಯಾ ಭಟ್ ಉತ್ತಮ ನಟಿ ಪ್ರಶಸ್ತ್ರಿ ಪಡೆದರು. ಈ ಸಮಾರಂಭಕ್ಕೆ ಪತಿ ರಣಬೀರ್ ಕಪೂರ್ ಜೊತೆ ಅಲಿಯಾ ಭಟ್ ಆಗಮಿಸಿದರು.
ಈ ವೇಳೆ ತನ್ನ ಮದುವೆ ಸೀರೆಯನ್ನೇ ಉಟ್ಟು ಬಂದ ಅಲಿಯಾ ಎಲ್ಲರ ಗಮನ ಸೆಳೆದರು.
ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಆಲಿಯಾ ಭಟ್ ಮೆಸ್ಸಿ ಹೇರ್ ಬನ್ ಹಾಗೂ ತನ್ನ ಮದುವೆ ಸೀರೆ ಧರಿಸಿ ಅದ್ಭುತವಾಗಿ ಕಾಣುತ್ತಿದ್ದರು. ಜೊತೆಗೆ ಚೋಕರ್ ನೆಕ್ಲೇಸ್, ಕಿವಿಗೆ ಸ್ಟಡ್ ಗಳು, ಸಬ್ಯಸಾಚಿ ವಿನ್ಯಾಸಗೊಳಿಸಿದ ಐವರಿ ಸೀರೆಗೆ ಹೊಂದಿಕೆಯಾಗುವ ಅರ್ಧ ತೋಳಿನ ಬ್ಲಾಸ್ ಅನ್ನು ಧರಿಸುವ ಮೂಲಕ ಆಲಿಯಾ ಭಟ್ ನ ಸೌಂದರ್ಯ ಇಮ್ಮಡಿಗೊಂಡಿತ್ತು
ಈ ವಿಡಿಯೋ ವೈರಲ್ ಆದ ಬಳಿಕ ನಟಿಯ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಗ್ರೇಟ್ ಮೂವ್" ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಮದುವೆ ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದೀರ. ಮತ್ತೊಬ್ಬರು "ಅವರು ಮದುವೆಯಲ್ಲಿ ಧರಿಸಿದ ಸೀರೆಯನ್ನು ಧರಿಸಿದ್ದು, ಈ ಸೀರೆಯಲ್ಲಿ ಮದುವೆ ವೇಳೆಗಿಂತಲೂ ಅದ್ಭುತವಾಗಿ ಕಾಣಿಸುತ್ತಿದ್ದಾರೆ" ಎಂದು ಕಮೆಂಟ್ ಸುರಿಮಳೆಗೈದಿದ್ದಾರೆ.
ಆಲಿಯಾ ಭಟ್ ಅವರು ಗಂಗೂಬಾಯಿ ಕತಿಯಾವಾಡಿ ಸಿನಿಮಾದಲ್ಲಿನ ನಟನೆಗೆ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಸಿನಿಮಾವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದು, ಹುಸೈನ್ ಜೈದಿ ಅವರು ಬರೆದಿರುವ ಮಾಫಿಯಾ ಕ್ವೀನ್ಸ್ ಆಫ್ ಮುಂಬೈ ಎಂಬ ಪುಸ್ತಕದಿಂದ ಪ್ರೇರಣೆ ಪಡೆದು ನಿರ್ಮಿಸಲಾಗಿದೆ. ಇನ್ನು ಈ ಸಿನಿಮಾವು ಅತ್ಯುತ್ತಮ ಚಿತ್ರಕತೆ ಹಾಗೂ ಅತ್ಯುತ್ತಮ ನಟಿ ವಿಭಾಗ ಇವೆರಡರಲ್ಲೂ ರಾಷ್ರೀಯ ಪ್ರಶಸ್ತಿ ಬಾಚಿಕೊಂಡಿದೆ..