ಮುಂಬೈ, ,ಅ 15 (DaijiworldNews/AK):ನಟಿ ರಶ್ಮಿಕಾ ಮಂದಣ್ಣ- ರಣಬೀರ್ ಕಪೂರ್ ಲಿಪ್ಲಾಕ್ ಬಾರೀ ವೈರಲ್ ಆಗಿದೆ. ‘ಅನಿಮಲ್’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ- ರಣಬೀರ್ ಕಪೂರ್ ಜೋಡಿ ಕಿಸ್ಸಿಂಗ್ ಸೀನ್ನಲ್ಲಿ ಭಾಗವಹಿಸಿದ್ದು, ನ್ಯಾಶನಲ್ ಲೆವೆಲ್ನಲ್ಲಿ ಸುದ್ದಿಯಾಗಿದೆ. ಇವರಿಬ್ಬರ ಲಿಪ್ಲಾಕ್ ಬಗ್ಗೆ ರಣಬೀರ್ ಪತ್ನಿ ಆಲಿಯಾ ಕೂಡ ಉತ್ತರಿಸಿದ್ದಾರೆ.
ನಿಮ್ಮ ಪತಿ ಹಾಗೂ ರಶ್ಮಿಕಾ ಕಿಸ್ ಮಾಡಿದ ಕುರಿತು ನೀವು ಏನು ಹೇಳುತ್ತೀರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಬೋಲ್ಡ್ ಆಗಿರುವ ಆಲಿಯಾ ಭಟ್ ಪ್ರಶ್ನೆ ಕೇಳಿ ನಕ್ಕಿದ್ದಾರೆ. ಅಷ್ಟೇ ಅಲ್ಲ ಇನ್ನಷ್ಟು ಕ್ಲೋಸ್ ಮೂವ್ ಮಾಡಬಹುದಿತ್ತು ಎಂದು ಉತ್ತರಿಸಿದ್ದಾರೆ.
ಇದಕ್ಕೆ ಅಯ್ಯೋ ಅದು ತೆರೆ ಮೇಲಷ್ಟೇ ಅಂದುಕೊಂಡು ಸುಮ್ಮನಿದ್ದೀರಾ. ಅದ್ರೆ ನಿಜವಾದ್ರೆ ಹೀಗನ್ನುತ್ತಿದ್ದೀರಾ ಎಂದು ನೆಟ್ಟಿಗರು ಆಲಿಯಾಗೆ ಪ್ರಶ್ನಿಸಿದ್ದಾರೆ.