ಮುಂಬೈ, ಅ 11 (DaijiworldNews/AK): ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಪುತ್ರಿ ಇರಾ ಖಾನ್ ಮದುವೆ ಅಕ್ಟೋಬರ್ ತಿಂಗಳಲ್ಲಿ ನಡೆಯಲಿದೆ ಎಂದು ಸುದ್ದಿಯಾಗಿತ್ತು .
ಇದೀಗ ಅಧಿಕೃತ ಮಾಹಿತಿ ಹೊರ ಬಿದ್ದಿದ್ದು 2024ರಲ್ಲಿ ಈ ಜೋಡಿ ಮದುವೆಯಾಗಲಿದೆ. ಜನವರಿ ಅಥವಾ ಫೆಬ್ರವರಿಯಲ್ಲಿ ಹೊಸ ಬದುಕಿಗೆ ಕಾಲಿಡಲಿದ್ದಾರೆ ಎಂದು ಸ್ವತಃ ಆಮೀರ್ ಖಾನ್ ಹೇಳಿಕೊಂಡಿದ್ದಾರೆ.
ಕಳೆದ ವರ್ಷ ನವೆಂಬರ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡು, ತನ್ನ ಪ್ರಿಯಕರಿಗೆ ಉಂಗುರ ತೊಡಿಸಿ ಎಂಗೇಜ್ಡ್ ಆಗಿರುವುದಾಗಿ ಘೋಷಣೆ ಮಾಡಿತ್ತು ಈ ಜೋಡಿ.
ಇದೀಗ ಇರಾ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ರಿಜಿಸ್ಟರ್ ಮದುವೆಯ ನಂತರ ಉದಯಪುರದಲ್ಲಿ ಸಂಪ್ರದಾಯಿಕವಾಗಿ ಈ ಜೋಡಿ ಸಪ್ತಪದಿ ತುಳಿಯಲಿದೆ. ಒಟ್ಟು ಮೂರು ದಿನಗಳ ಕಾಲ ಈ ಮದುವೆ ನಡೆಯಲಿದೆ ಎಂದು ಅವರು ಆಪ್ತರು ಮಾಹಿತಿ ನೀಡಿದ್ದಾರೆ.
ಇರಾ ಖಾನ್ ಮತ್ತು ನೂಪುರ್ ಶಿಖಾರೆ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆ ಪ್ರೀತಿ ಇದೀಗ ಮದುವೆ ಹಂತಕ್ಕೆ ಬಂದಿದೆ. . ಪ್ರೀತಿಸುತ್ತಿರುವಾಗಲೇ ಒಟ್ಟಿಗೆ ವಾಸವಿದ್ದ ಈ ಜೋಡಿ ಇದೀಗ ಅಧಿಕೃತವಾಗಿ ಸತಿ ಪತಿಯಾಗಲು ಹೊರಟಿದೆ.
ನೂಪುರ್ ಶಿಖಾರೆ ಮತ್ತು ಇರಾ ಖಾನ್ ಪ್ರೀತಿಗೆ ಹಲವು ವರ್ಷಗಳು. ಆಕೆಗೆ ಫಿಸಿಕಲ್ ಟ್ರೈನರ್ ಆಗಿದ್ದ ನೂಪುರ್ ನನ್ನು ಇರಾ ಇಷ್ಟಪಡುತ್ತಾಳೆ. ಅವನ ಜೊತೆಯೇ ಹಲವು ಟ್ರಿಪ್ ಗಳನ್ನು ಕೂಡ ಮಾಡಿದ್ದಾರೆ. ಅಲ್ಲದೇ ಇಬ್ಬರೂ ಒಂದೇ ಮನೆಯಲ್ಲೇ ಹಲವು ದಿನಗಳಿಂದ ವಾಸಿಸುತ್ತಿದ್ದರು. ಇದೊಂದು ಸಹಜೀವನ ಎಂದೇ ಬಾಲಿವುಡ್ ಮಾತಾಡಿಕೊಂಡಿತ್ತು. ಅದಕ್ಕೀಗ ಫುಲ್ ಸ್ಟಾಪ್ ಇಡುವಂತಹ ಕೆಲಸವನ್ನು ಈ ಜೋಡಿ ಮಾಡಿದೆ.ಕೊನೆಗೂ ತಾನು ಮೆಚ್ಚಿದ್ದ ಮತ್ತು ಜೊತೆ ಜೊತೆಯಲ್ಲೇ ಓಡಾಡುತ್ತಿದ್ದ ಹುಡುಗನನ್ನೇ ಮದುವೆ ಆಗುತ್ತಿರುವ ಇರಾ ಬಗ್ಗೆ ಬಾಲಿವುಡ್ ಮೆಚ್ಚುಗೆ ವ್ಯಕ್ತಪಡಿಸಿದೆ.