ಮುಂಬೈ, ಅ 07 (DaijiworldNews/AK) :ತೆಲುಗಿನ ಖ್ಯಾತ ನಟ ಪ್ರಭಾಸ್ ಮದುವೆ ವಿಚಾರ ಸದಾ ಸುದ್ದಿಯಲ್ಲಿರುತ್ತದೆ. ನಟ, ಮದುವೆಯ ಪ್ರಶ್ನೆ ಕೇಳುತ್ತಿದ್ದಂತೆಯೇ, ಮದುವೆಗೆ ಕಾಲ ಕೂಡಿ ಬರಲಿ. ಇದೇ ತಿರುಪತಿಯಲ್ಲೇ ನಾನು ಮದುವೆ ಮಾಡಿಕೊಳ್ಳುತ್ತೇನೆ ಎಂದಿದ್ದರು. ಅವರ ಹೆಸರು ಮಾತ್ರ ನಟಿ ಅನುಷ್ಕಾ ಜೊತೆ ಥಳಕು ಹಾಕಿಕೊಳ್ಳುತ್ತಲೇ ಇದೆ.
ಆದರೆ ಇದೀಗ ಕುತೂಲಹದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದೇನೆಂದರೆ, ಅನುಷ್ಕಾ ಮತ್ತು ಪ್ರಭಾಸ್ ಅವರ ಮದುವೆಯ ಫೋಟೋ ವೈರಲ್ ಆಗಿವೆ. ಇದು ಅಲ್ಲದೇ ಇಬ್ಬರ ಬಳಿ ಒಂದು ಮಗು ಕೂಡ ಇದೆ. ಇದನ್ನು ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯ ನಡುವೆಯೇ ಈ ಫೋಟೋಗಳು ವೈರಲ್ ಆಗಿವೆ. ಕೆಲವರು ಅನುಷ್ಕಾ ಕೆಲ ವರ್ಷ ಗ್ಯಾಪ್ ತೆಗೆದುಕೊಂಡಿದ್ದು ಇದೇ ಕಾರಣಕ್ಕೇನಾ ಎಂದು ಪ್ರಶ್ನೆ ಹುಟ್ಟಿಕೊಂಡಿದೆ.
ಇತ್ತ ಪ್ರಭಾಸ್ ಅಭಿನಯದ ಮತ್ತೊಂದು ಅದ್ಧೂರಿ ಆಕ್ಷನ್ ಚಿತ್ರ ಸಲಾರ್, ಸೆಪ್ಟೆಂಬರ್ 28ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಅದನ್ನು ಮುಂದೂಡಲಾಗಿದ್ದು, ಡಿಸೆಂಬರ್ 22ರ ಡೇಟ್ ನಿಗದಿ ಮಾಡಲಾಗಿದೆ. ಇವೆಲ್ಲದಕ್ಕೂ ಒಂದಕ್ಕೊಂದು ಹೋಲಿಕೆ ಮಾಡಿ ಫೋಟೋಗಳಿಗೆ ವಿಭಿನ್ನ ರೀತಿಯ ಕಮೆಂಟ್ ಮಾಡಲಾಗುತ್ತಿದೆ.
ಆದರೆ ಈ ಫೋಟೋ ಹಿಂದಿರೋ ಕಥೆಯೇ ಬೇರೆ. ಇದು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಯುಗ. ಹಾಗಾಗಿ ಫೋಟೋ, ವಿಡಿಯೋಗಳಲ್ಲಿ ಯಾರ ಜೊತೆ ಯಾರನ್ನಾದರೂ ಸೇರಿಸಿ ಏನು ಬೇಕಾದರೂ ಮಾಡುವ ಕಾಲವಿದು. ಈ ಫೋಟೋಗಳೂ ಅದೇ ಎಐನಿಂದ ಸೃಷ್ಟಿ ಮಾಡಿರುವುದು ಎನ್ನುವುದನ್ನು ಕೆಲವು ಅಭಿಮಾನಿಗಳು ಕಂಡುಹಿಡಿದಿದ್ದಾರೆ.