ಮುಂಬಯಿ, ಅ 03 (DaijiworldNews/AK):ಹಾಟ್ ಲುಕ್ & ಡ್ರೆಸ್ ಗಳಿಂದಲೇ ವೈರಲ್ ಆಗುವ ಉರ್ಫಿ ಈ ಬಾರಿ ಬೇರೊಂದು ಕಾರಣದಿಂದ ನೆಟ್ಟಿಗರ ಗಮನ ಸೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ಉರ್ಫಿ ಜಾವೇದ್ ಅವರು ದೇವಸ್ಥಾನವೊಂದರಲ್ಲಿ ಹುಡುಗನ ಜೊತೆ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹವನ ಕುಂಡದ ಮುಂದೆ ಉರ್ಫಿ ಜಾವೇದ್ ಹುಡುಗನೊಬ್ಬನ ಜೊತೆ ಕೂತಿದ್ದಾರೆ. ಪಕ್ಕದಲ್ಲಿ ಆರ್ಚಕರು ಕೂಡ ಇದ್ದಾರೆ. ಇದು ರೋಕಾ ಸಮಾರಂಭ ಎಂದು ಕೆಲ ಅಭಿಮಾನಿಗಳು ಹೇಳಿದ್ದಾರೆ. ಉರ್ಫಿ ಜಾವೇದ್ ರಹಸ್ಯವಾಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಎಂದು ನೆಟ್ಟಿಗರು, ಫ್ಯಾನ್ಸ್ ಗಳು ಚರ್ಚಿಸುತ್ತಿದ್ದಾರೆ.
ಉರ್ಫಿ ಅವರ ಸಹೋದರಿ ಉರುಸಾ ಅವರು ಈ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಆಗಿ ಹಂಚಿಕೊಂಡಿದ್ದು, ಎಂಗೇಜ್ ಮೆಂಟ್ ಸುದ್ದಿಯ ಬಗ್ಗೆ ಮತ್ತಷ್ಟು ಪ್ರಶ್ನೆ ಹುಟ್ಟುವಂತೆ ಮಾಡಿದೆ.
ಉರ್ಫಿ ಜಾವೇದ್ ಸಾರ್ವಜನಿಕವಾಗಿ ಎಂದೂ ಕೂಡ ತನ್ನ ಲೈಫ್ ಬಗ್ಗೆ ಮಾತನಾಡಿಕೊಂಡಿಲ್ಲ. ಈ ವೈರಲ್ ಫೋಟೋ ಬಗ್ಗೆ ಉರ್ಫಿ ಕಡೆಯಿಂದ ಪ್ರತಿಕ್ರಿಯೆ ನೀಡಬೇಕಿದೆ.
ಇತ್ತೀಚೆಗೆ ಮುಂಬಯಿ ಗಣೇಶ ಚತುರ್ಥಿ ವೇಳೆ ನಟಿ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ್ದು ಸುದ್ದಿಯಾಗಿತ್ತು.