ಬೆಂಗಳೂರು,ಏ12(AZM):ಶಿವರಾಜ್ ಕುಮಾರ್,ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರು ಸೇರಿ ಸಿನಿಮಾ ಮಾಡುವ ಆಲೋಚನೆಯಲ್ಲಿದ್ದು, ವರನಟ ರಾಜುಕುಮಾರ್ ರವರ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ನೀಡಲಿದ್ದಾರೆ.
ಬೆಂಗಳೂರು, ಏ.12- ವರನಟ ಡಾ. ರಾಜ್ಕುಮಾರ್ ಅವರ ೧೩ನೇ ವರ್ಷದ ಪುಣ್ಯಸ್ಮರಣೆ ನಗರದ ಕಂಠೀರವ ಸ್ಟುಡಿಯೋ ಆವರಣದಲ್ಲಿ ಇಂದು ನಡೆದಿದ್ದು ಈ ಸಂದರ್ಭದಲ್ಲಿ ನಟ ರಾಘವೇಂದ್ರ ರಾಜ್ ಕುಮಾರ್ ರವರು ಮಾಧ್ಯಮದವರೊಂದಿಗೆ ಹೇಳಿದ್ದಾರೆ.
ರಾಜ್ಕುಮಾರ್ ಹಾಗೂ ಪಾರ್ವತ್ಮ ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯನ್ನು ಪುಣ್ಯಭೂಮಿಯ ಸಮಾಧಿಗೆ ವಿಶೇಷ ಅಲಂಕಾರ ಮಾಡುವ ಮೂಲಕ ನೆರವೇರಿಸಿದರು.
ರಾಜ್ಕುಮಾರ್ ಅವರ ಸಹೋದರಿ ನಾಗಮ್ಮ, ಮಕ್ಕಳಾದ ರಾಘವೇಂದ್ರರಾಜ್ಕುಮಾರ್, ಶಿವರಾಜ್ಕುಮಾರ್ ಹಾಗೂ ಪುನೀತ್ರಾಜ್ ಕುಮಾರ್ ಸೇರಿದಂತೆ ಮಕ್ಕಳು, ಮೊಮ್ಮಕ್ಕಳು, ಕುಟುಂಬಸ್ಥರು, ಆತ್ಮೀಯರು ಉಪಸ್ಥಿತರಿದ್ದು ಪೂಜೆ ನೆರವೇರಿಸಿದರು.
2006ರಲ್ಲಿ ನಿಧನರಾದ ರಾಜ್ಕುಮಾರ್ ಅವರ 13ನೇ ಪುಣ್ಯತಿಥಿ ಅಂಗವಾಗಿ ಸಮಾಧಿ ಬಳಿ ನೂರಾರು ಮಂದಿ ಆಗಮಿಸಿ ಪೂಜೆ ಸಲ್ಲಿಸಿದರು. ಪುನೀತ್ ರಾಜ್ಕುಮಾರ್ ಅವರ ಪಿಆರ್ ಕೆ ಪ್ರೊಡಕ್ಷನ್ನಿಂದ ನಿರ್ಮಾಣವಾಗಿರುವ ಚೊಚ್ಚಲ ಚಿತ್ರ ಕಾವಲುದಾರಿ ಇಂದು ರಾಜ್ ಅವರ ಪುಣ್ಯಸ್ಮರಣೆ ದಿನವೇ ಬಿಡುಗಡೆಗೊಂಡಿದೆ.