ಮುಂಬೈ, ಸೆ 13 (DaijiworldNews/AK): ಬಾಲಿವುಡ್ನ ಬೆಬೋ ಕರೀನಾ ಕಪೂರ್ ಜಾನೆ ಜಾನ್ ಸರಣಿ ಮೂಲಕ ತನ್ನ ಓಟಿಟಿ ಚೊಚ್ಚಲ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಕರೀನಾ ಕಪೂರ್ ಅವರು ತಮ್ಮ ಅಂತರ್ಧರ್ಮೀಯ ವಿವಾಹ ಮತ್ತು ಅವರ ಮತ್ತು ಪತಿ ಸೈಫ್ ಅಲಿ ಖಾನ್ ನಡುವಿನ 10 ವರ್ಷಗಳ ವಯಸ್ಸಿನ ಅಂತರದ ಬಗ್ಗೆ ಬಂದ ಟೀಕೆಗಳು ಬಗ್ಗೆ ಸಂದರ್ಶನವೊಂದರಲ್ಲಿ ಉತ್ತರಿಸಿದ್ದಾರೆ.
ನಟ ಸೈಫ್ ಅಲಿ ಖಾನ್ ಮತ್ತು ಅವರ ಅಂತರ್ಧರ್ಮೀಯ ವಿವಾಹ ಮತ್ತು ವಯಸ್ಸಿನ ಅಂತರಕ್ಕಾಗಿ ಟ್ರೋಲರ್ಗಳ ಬಗ್ಗೆ ಏನು ಹೇಳಬೇಕೋ ಹಾಗೆಯೇ ಉತ್ತರಿಸಿದ್ದಾರೆ.
ಕರೀನಾ ವಯಸ್ಸಿನ ವ್ಯತ್ಯಾಸದಿಂದೇನೂ ಅಷ್ಟೇನೂ ವ್ಯತ್ಯಾಸ ಗೊತ್ತಾಗಿಲ್ಲ. ಸೈಫ್ ವಯಸ್ಸಾಗುತ್ತಿದ್ದಂತೆ ಹಾಟ್ ಆಗುತ್ತಿದ್ದಾರೆ ಎಂದು ಕರೀನಾ ಕಪೂರ್ ಹೇಳಿದ್ದಾರೆ. . ಅವರ ನಂಬಿಕೆ ಅಥವಾ ವಯಸ್ಸಿನ ವ್ಯತ್ಯಾಸದಿಂದ ಏನೂ ತೊಂದರೆ ಇಲ್ಲ ಎಂದಿದ್ದಾರೆ.