ಮುಂಬೈ, ಸ 01 (DaijiworldNews/HR): ತಮನ್ನಾ ಭಾಟಿಯಾರೊಂದಿಗೆ ವಿಜಯ್ ವರ್ಮಾ ಡೇಟಿಂಗ್ ಮಾಡುತ್ತಿದ್ದು, ಈ ಜೋಡಿ ಒಟ್ಟಾಗಿ ಸುತ್ತಾಡುತ್ತಾರೆ. ಇತ್ತೀಚೆಗೆ ಈ ಜೋಡಿ ಮಾಲ್ಡೀವ್ಸ್ಗೆ ತೆರಳಿತ್ತು.
ಮಾಲ್ಡೀವ್ಸ್ ಮುಗಿಸಿ ಈ ಜೋಡಿ ಮುಂಬೈಗೆ ಆಗಮಿಸಿದ್ದು, ಈ ವೇಳೆ ಪಾಪರಾಜಿಗಳು ಕೇಳಿದ ಪ್ರಶ್ನೆ ವಿಜಯ್ ವರ್ಮಾ ಅವರ ಸಿಟ್ಟಿಗೆ ಕಾರಣವಾಗಿದೆ.
ವಿಜಯ್ ವರ್ಮಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಪಾಪರಾಜಿಗಳು ಫೋಟೋ-ವಿಡಿಯೋ ಕ್ಲಿಕ್ಕಿಸಲು ಎಲ್ಲರೂ ಮುಗಿಬಿದ್ದು, ‘ಮಾಲ್ಡೀವ್ಸ್ ಸಮುದ್ರ ತೀರದ ಮಜವನ್ನು ಪಡೆದು ಬಂದಿರೇ’ ಎಂದು ಓರ್ವ ಪಾಪರಾಜಿ ಕೇಳಿದ್ದು, ಇದಕ್ಕೆ ಉತ್ತರಿಸಿದ ವಿಜಯ್ ವರ್ಮಾ, ಈ ರೀತಿ ನೀವು ಮಾತನಾಡುವಂತಿಲ್ಲ ಎಂದು ನೇರವಾಗಿಯೇ ಹೇಳಿ ಗರಂ ಆಗಿದ್ದಾರೆ.