ಮುಂಬೈ, ಆ 28 (DaijiworldNews/AK): 'ಮಿಸ್ ದಿವಾ ಯೂನಿವರ್ಸ್ 2023’ ಕಿರೀಟವನ್ನು ಚಂಡೀಗಢ ಮೂಲದ ಶ್ವೇತಾ ಶಾರದಾ ಅವರು ಮುಡಿಗೇರಿಸಿಕೊಂಡಿದ್ದಾರೆ. ಮುಂಬೈನಲ್ಲಿ ಆಗಸ್ಟ್ 27ರಂದು ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಶ್ವೇತಾ ಅವರು ಮೊದಲ ಸ್ಥಾನ ಪಡೆದು ಕಿರೀಣವನ್ನು ತನ್ನದಾಗಿಸಿಕೊಂಡರು.
2022ರ ಮಿಸ್ ದಿವಾ ಯೂನಿವರ್ಸ್ ಆಗಿದ್ದ ಮಂಗಳೂರು ಮೂಲದ ದಿವಿತಾ ರೈ ಅವರು ಶ್ವೇತಾಗೆ ‘ಮಿಸ್ ದಿವಾ ಯೂನಿವರ್ಸ್’ ಕಿರೀಟ ತೊಡಿಸಿದರು. ಸೋನಲ್ ಕುಕ್ರೇಜಾ ಅವರು ‘ಮಿಸ್ ದಿವಾ ಸುಪ್ರಾನ್ಯಾಷನ್ 2023’ ಆಗಿ ಹೊರಹೊಮ್ಮಿದರು. ಕರ್ನಾಟಕದ ತ್ರಿಶಾ ಶೆಟ್ಟಿ ‘ಮಿಸ್ ದಿವಾ ಯೂನಿವರ್ಸ್ 2023’ ರನ್ನರ್ ಅಪ್ ಆದರು.
ದಿವಿತಾ ಅವರು ‘ಮಿಸ್ ದಿವಾ ಯೂನಿವರ್ಸ್’ ಕಿರೀಟ ತೊಡಿಸುತ್ತಿದ್ದಂತೆ ಶ್ವೇತಾ ಅವರು ಖುಷಿಯಿಂದ ಕಣ್ಣೀರು ಹಾಕಿದರು. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಶ್ವೇತಾ ಅವರಿಗೆ ಶುಭಶಯ ಕೋರಿದ್ದಾರೆ.
ಶ್ವೇತಾ ಅವರು ಹುಟ್ಟಿದ್ದು ಚಂಡೀಗಢದಲ್ಲಿ. 16ನೇ ವಯಸ್ಸಿನಲ್ಲಿ ಅವರು ಮುಂಬೈಗೆ ತೆರಳಿ ಸೆಟಲ್ ಆದರು. ಅವರಿಗೆ ಈಗ 22 ವರ್ಷ ವಯಸ್ಸು. ‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್’, ‘ಡ್ಯಾನ್ಸ್ ದೀವಾನೆ ಮತ್ತು ಡ್ಯಾನ್ಸ್’ ಹಾಗೂ ‘ಡ್ಯಾನ್ಸ್ +’ ರಿಯಾಲಿಟಿ ಶೋಗಳಲ್ಲಿ ಶ್ವೇತಾ ಭಾಗವಹಿಸಿದ್ದರು. ಈ ಮೂಲಕ ತಾವು ಅದ್ಭುತ ಡ್ಯಾನ್ಸರ್ ಎಂಬುದನ್ನು ಸಾಬೀತು ಮಾಡಿಕೊಂಡಿದ್ದಾರೆ. ಜೊತೆಗೆ ಕೊರಿಯೋಗ್ರಾಫರ್ ಆಗಿಯೂ ಕೆಲಸ ಮಾಡಿದ್ದಾರೆ.