ಮುಂಬಯಿ, ಆ 26 (DaijiworldNews/AK): ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ಬಾಲಿವುಡ್ ಹಾಟ್ ಲವ್ ಬರ್ಡ್ಸ್ ಮಲೈಕಾ ಆರೋರಾ – ಅರ್ಜುನ್ ಕಪೂರ್ ನಡುವೆ ಬಿರುಕು ಮೂಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಕಳೆದ ಕೆಲ ವರ್ಷಗಳಿಂದ ಡೇಟ್ ನಲ್ಲಿರುವ ಅರ್ಜುನ್ ಕಪೂರ್ ಹಾಗೂ ಮಲೈಕಾ ಆರೋರಾ ಮದುವೆ ಆಗುತ್ತಾರೆ ಎಂಬ ಹಂತಕ್ಕೆ ಚರ್ಚೆ ಆಗಿತ್ತು.
ಮಲೈಕಾ ಜೊತೆ ಅರ್ಜುನ್ ನಡುವೆ ವಯಸ್ಸಿನ ಅಂತರವಿದ್ದರು ಡೇಟ್ ನಲ್ಲಿರುವ ವಿಚಾರಕ್ಕೆ ಅನೇಕ ಬಾರಿ ಟ್ರೋಲ್ ಆಗಿದ್ದಾರೆ. ಆದರೆ ಇಬ್ಬರು ಎಂದಿಗೂ ತಲೆಕೆಡಿಸಿಕೊಂಡಿಲ್ಲ.
ಆದರೆ ಇತ್ತೀಚೆಗೆ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ಗಾಸಿಪ್ ಗಳು ಹರಿದಾಡಿದೆ.
ಮಲೈಕಾ ಅವರು ತನ್ನ ಪ್ರಿಯಕರ ಅರ್ಜುನ್ ಅವರ ಪ್ರತಿ ಪೋಸ್ಟ್ ಗೆ ಲೈಕ್ ಕೊಡುತ್ತಾರೆ. ಕೆಲವೊಮ್ಮೆ ಕಮೆಂಟ್ ಮಾಡುತ್ತಾರೆ. ಆದರೆ ಇತ್ತೀಚೆಗಿನ ಅರ್ಜುನ್ ಅವರ ಯಾವುದೇ ಪೋಸ್ಟ್ಗೆ ಲೈಕ್ ಮಾಡಿಲ್ಲ.
ಇತ್ತ ನಟಿ ಮಲೈಕಾ ಇತ್ತೀಚೆಗೆ ಬದಲಾವಣೆಯ ಕುರಿತು “‘change’ and not longing for the past” ಎನ್ನುವ ಪೋಸ್ಟ್ ವೊಂದನ್ನು ಹಾಕಿದ್ದರು. ಈ ಪೋಸ್ಟ್ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ಮಾತಿಗೆ ಮತ್ತಷ್ಟು ಪುಷ್ಟಿ ನೀಡಿದೆ.