ಮುಂಬೈ, ಆ 25 (DaijiworldNews/AK):ನ್ಯಾಷನಲ್ ಫಿಲ್ಮ್ ಅವಾರ್ಡ್ 2023 ಅನೌನ್ಸ್ ಆಗಿದ್ದು, ಕನ್ನಡದ ಚಾರ್ಲಿ 777 ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂದು ಪ್ರಶಸ್ತಿ ಸಿಕ್ಕಿದೆ. ಆದರೆ ಕನ್ನಡ ಸಿನಿಮಾ ಬಿಟ್ಟು ಪರಭಾಷೆಯ ಸಿನಿಮಾಗಳಿಗೆ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಶುಭಕೋರಿದ್ದಾರೆ. ರಶ್ಮಿಕಾ ಅವರ ಈ ನಡೆಗೆ ನೆಟ್ಟಿಗರು ಕಿಡಿಕಾರಿದ್ದಾರೆ.
ಕನ್ನಡ ಸಿನಿಮಾದಿಂದ ಚಿತ್ತರಂಗಕ್ಕೆ ಎಂಟ್ರಿ ಕೊಟ್ಟು, , ಈಗ ಸೌತ್-ಬಾಲಿವುಡ್ನಲ್ಲಿ ಗಮನ ಸೆಳೆಯುತ್ತಿರುವ ನಟಿ ರಶ್ಮಿಕಾ ಮಂದಣ್ಣ ನಡೆಯನ್ನ ನೆಟ್ಟಿಗರು ತೀವ್ರ ಖಂಡಿಸಿದ್ದಾರೆ. ಸಹನಟ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿಗೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಅಂತ ನ್ಯಾಷನಲ್ ಅವಾರ್ಡ್ ಒಲಿದು ಬಂದಿದೆ. ಆದರೆ ಕನ್ನಡ ಸಿನಿಮಾವನ್ನ ಕಡೆಗಣಿಸಿ ಪರಭಾಷೆಯ ಸಿನಿಮಾಗಳಿಗೆ ನಟಿ ಭೇಷ್ ಎಂದಿದ್ದಾರೆ.
ತಾವು ನಟಿಸಿರುವ ‘ಪುಷ್ಪ’ ಸಿನಿಮಾದ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ಗೆ ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್ ಪ್ರಶಸ್ತಿ ಒಲಿದು ಬಂದಿದೆ. ಸಹನಟ ಸಿದ್ಧಾರ್ಥ್ ಮಲ್ಹೋತ್ರಾ ಶೇರ್ಷಾ ಸಿನಿಮಾಗೆ ಸ್ಪೆಷಲ್ ಜ್ಯೂರಿ ಅವಾರ್ಡ್ ಸಿಕ್ಕಿದೆ. ಬೆಸ್ಟ್ ನಟಿ ಅವಾರ್ಡ್ ‘ಗಂಗೂಬಾಯಿ ಕಾಥಿಯಾವಾಡಿ’ ನಟನೆಗೆ ಆಲಿಯಾ ಭಟ್, ‘ಮಿಮಿ’ ಚಿತ್ರದ ನಟನೆಗೆ ಕೃತಿ ಸನೋನ್ ಗೆದ್ದಿದ್ದು ವಿಶ್ ಮಾಡಿದ್ದಾರೆ. ತಮ್ಮ ಸಹನಟ ಪುಷ್ಪ ಹೀರೋ ಅಲ್ಲು ಅರ್ಜುನ್ಗೆ ಬೆಸ್ಟ್ ಆ್ಯಕ್ಟರ್ ಅವಾರ್ಡ್ ಸಿಕ್ಕಿದೆ. ಅಲ್ಲು ಅರ್ಜುನ್ಗೆ ರಶ್ಮಿಕಾ ಮಂದಣ್ಣ ಹಾರೈಸಿ, ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.