ಮುಂಬೈ, ಆ 23 (DaijiworldNews/AK): ನಟಿ ರಾಖಿ ಸಾವಂತ್ ಪತಿ ಆದಿಲ್ ಜೈಲಿನಿಂದ ಹೊರ ಬರುತ್ತಿದ್ದಂತೆಯೇ ಆರೋಪಗಳ ಸುರಿಮಳೆಗೈದಿದ್ದಾರೆ.
ನಿನ್ನೆಯಷ್ಟೇ ಪತ್ರಿಕಾಗೋಷ್ಠಿ ಮಾಡಿದ್ದ ಆದಿಲ್, ತಮಗೆ ರಾಖಿಯಿಂದ ಆದ ಮೋಸದ ಎಲ್ಲ ವಿವರವನ್ನೂ ಬಿಚ್ಚಿಟ್ಟಿದ್ದರು. ‘ರಾಖಿ ಗರ್ಭಚೀಲವನ್ನು ತೆಗೆಸಿಕೊಂಡಿದ್ದಾಳೆ. ಆಕೆಗೆ ಮಗು ಪಡೆಯುವ ಸಾಮರ್ಥ್ಯವಿಲ್ಲ. ಹಾಗಾಗಿ ಆಕೆಗೆ ಮಗುವಾಗುವುದಿಲ್ಲ’ ಎಂದು ಹೇಳಿದ್ದರು ಆದಿಲ್.
ಬಳಿಕ ರಾಖಿ ಪತ್ರಿಕಾಗೋಷ್ಠಿ ನಡೆಸಿ, ಆದಿಲ್ ಮೇಲೆ ಆರೋಪಗಳನ್ನು ಮಾಡಿದ್ದಾರೆ. ನಿನ್ನೆ ವೈದ್ಯರೊಂದಿಗೆ ವಿಡಿಯೋ ಲೈವ್ ಮಾಡಿದ್ದ ರಾಖಿ, ತನಗೆ ಮಗು ಮಾಡಿಕೊಳ್ಳುವ ಸಾಮರ್ಥ್ಯವಿದೆ ಎಂದು ಹೇಳಿದ್ದರು. ಗರ್ಭಕೋಶದಲ್ಲಿ ಸಮಸ್ಯೆಯಿದ್ದ ಕಾರಣಕ್ಕಾಗಿ ಶಸ್ತ್ರ ಚಿಕಿತ್ಸೆ ನಡೆಸಿದ್ದರ ಬಗ್ಗೆಯೂ ಹೇಳಿದ್ದರು.
ಇವತ್ತು ಆದಿಲ್ ಬಗ್ಗೆ ಮತ್ತೆ ಮಾತನಾಡಿದ್ದಾರೆ. ಮದುವೆಗೂ ಮುಂಚೆ ಆದಿಲ್ ತನ್ನನ್ನು ಗರ್ಭಿಣಿ ಮಾಡಿದ್ದ. ಮದುವೆಗೂ ಮುಂಚೆ ನಾನು ಪ್ರಗ್ನೆಂಟ್ ಆಗಿ ಕಷ್ಟ ಪಟ್ಟಿದ್ದೇನೆ ಎಂದು ಆರೋಪ ಮಾಡಿದ್ದಾರೆ.