ಕೊಡಗು, ಆ 22 (DaijiworldNews/HR): ಆಗಸ್ಟ್ 24ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ.
ಕೊಡವ ಪದ್ಧತಿಯಂತೆ ಆಗಸ್ಟ್ 24ರಂದು ಸ್ಟಾರ್ ಜೋಡಿಯ ಮದುವೆ ನಡೆಯುತ್ತಿದ್ದು, ಪೂಜಾ ವಿಧಾನಗಳು ನಟಿಯ ಮನೆಯಲ್ಲಿ ಜರಗುತ್ತಿವೆ.
ಇನ್ನು ಹರ್ಷಿಕಾ-ಭುವನ್ 12 ವರ್ಷಗಳ ಗೆಳೆತನಕ್ಕೆ ಮದುವೆಯ ಮುದ್ರೆ ಒತ್ತಲು ಸಜ್ಜಾಗಿದ್ದು, ಈ ಕುರಿತ ವೀಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ.