ಕೊಡಗು, ಆ 14 (DaijiworldNews/AK): ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಛ ಹಾಗೂ ಸ್ನೇಹಿತನಾಗಿದ್ದ ನಟ ಭುವನ್ ಪೊನ್ನಣ್ಣ ದಾಂಪತ್ಯ ಜೀವನಕ್ಕೆ ಆಗಸ್ಟ್ 24 ರಂದು ಕಾಲಿಡಲಿದ್ದಾರೆ.
ಸ್ಯಾಂಡಲ್ವುಡ್ ತಾರೆಯರಾದ ಭುವನ್ ಹಾಗೂ ಹರ್ಷಿಕಾ ಅವರ ಅದ್ದೂರಿ ವಿವಾಹವು ವಿರಾಜಪೇಟೆಯಲ್ಲಿ ನಡೆಯಲಿದೆ.ಕೊಡವ ಶೈಲಿಯಲ್ಲಿ ಮದುವೆ ನಡೆಯಲಿದ್ದು, ವಿರಾಜಪೇಟೆಯ “ಅಮ್ಮತಿ ಕೊಡವ ಸಮಾಜ”ದಲ್ಲಿ ಸಂಭ್ರಮದ ವಿವಾಹ ನಡೆಯಲಿದೆ.
ಈಗಾಗಲೇ ಸಿನಿಮಾ ಹಾಗೂ ರಾಜಕೀಯ ಗಣ್ಯರಿಗೆ ಮದುವೆ ಆಮಂತ್ರಣ ನೀಡಿದ ಜೋಡಿ ಸಿಎಂ ಸಿದ್ದರಾಮಯ್ಯ , ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಇತರ ರಾಜಕೀಯ ಗಣ್ಯರಿಗೆ ಮದುವೆಗೆ ಆಹ್ವಾನಿಸಿದ್ದಾರೆ.
ಸಿನಿಮಾ ತಾರೆಯರಾದ ರವಿಚಂದ್ರನ್, ಶಿವರಾಜ್ ಕುಮಾರ್ ,ಗಣೇಶ್, ದೊಡ್ಡಣ್ಣ, ಶ್ರೀನಾಥ್, ಜಯಮಾಲ, ಸುಧಾರಾಣಿ, ತಾರಾ, ಮಾಲಾಶ್ರೀ, ಅನು ಪ್ರಭಾಕರ್ ಅಮೂಲ್ಯ, ದಿಗಂತ್, ಯಶ್- ರಾಧಿಕಾ, ಅಶ್ವಿನಿ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ದುನಿಯಾ ವಿಜಯ್ ಸೇರಿದಂತೆ ಅನೇಕ ಗಣ್ಯರಿಗೆ ಆಮಂತ್ರಣ ಪತ್ರಿಕೆ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ.
ಮಾಧ್ಯಮ ಮಿತ್ರರಿಗೂ ಭುವನ್ -ಹರ್ಷಿಕಾ ಕಡೆಯಿಂದ ವಿಶೇಷ ಆಹ್ವಾನ ನೀಡಲಾಗಿದೆ.