ಮುಂಬೈ, ಆ 12 (DaijiworldNews/AK): ಬಹುಕೋಟಿ ವೆಚ್ಚದಲ್ಲಿ ತಯಾರಾದ ಜೈಲರ್ ಸಿನಿಮಾ ಬಿಡುಗಡೆಗೂ ಮುನ್ನ ಸೂಪರ್ ಸ್ಟಾರ್ ರಜನಿಕಾಂತ್ ಹಿಮಾಲಯಕ್ಕೆ ತೆರಳಿದ್ದಾರೆ.
ಹಿಮಾಲಯದಲ್ಲಿ ರಜನಿ ಎಲ್ಲಿರುತ್ತಾರೆ? ಏನು ಮಾಡುತ್ತಾರೆ? ಅವರು ಇರುವ ಸ್ಥಳ ಹೇಗಿರುತ್ತದೆ ಎಂಬ ಪ್ರಶ್ನೆಗಳು ಅಭಿಮಾನಿಗಳನ್ನು ಹುಟ್ಟುವುದು ಸಹಜ. ಈ ಎಲ್ಲದಕ್ಕೂ ಉತ್ತರ ಎನ್ನುವಂತೆ ಹೃಷಿಕೇಶದಲ್ಲಿರುವ ಕನ್ನಡಿಗರೊಬ್ಬರು ಸ್ವತಃ ರಜನಿಯನ್ನೂ ಅವರನ್ನ ಹಿಮಾಲಯದಲ್ಲಿ ಭೇಟಿ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ರಜನಿಕಾಂತ್ ಹಿಮಾಲಯಕ್ಕೆ ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ ಕೊವಿಡ್ ಕಾರಣದಿಂದ ಕಳೆದ ನಾಲ್ಕು ವರ್ಷಗಳಲ್ಲಿ ಅವರಿಗೆ ಅಲ್ಲಿಗೆ ತೆರಳೋಕೆ ಸಾಧ್ಯವಾಗಿರಲಿಲ್ಲ. ‘ಜೈಲರ್’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಅವರು ಹೃಷಿಕೇಶಕ್ಕೆ ಭೇಟಿಕೊಟ್ಟಿದ್ದಾರೆ.ಹೃಷಿಕೇಶದ ಆಶ್ರಮಕ್ಕೆ ಬಂದು ಉಳಿದುಕೊಳ್ಳೋದು ಸಾಮಾನ್ಯ. ರಜನಿಕಾಂತ್ ಅವರ ಆಧ್ಯಾತ್ಮ ಗುರುಗಳ ಸಾಲಿನಲ್ಲಿ ಸ್ವಾಮಿ ದಯಾನಂದ ಸರಸ್ವತಿ ಸ್ವಾಮೀಜಿ ಕೂಡ ಒಬ್ಬರು.
ಆದರೆ, ಹೃಷಿಕೇಶದಲ್ಲಿ ರಜನಿ ಒಬ್ಬರೇ ಬಂದಿದ್ದರು. ಯಾವುದೇ ಬೌನ್ಸರ್ಗಳು ಇರಲಿಲ್ಲ. ಅಲ್ಲಿದ್ದು ನೋಡಿದವರಿಗೆ ಇವರು ರಜನೀನೇನಾ ಎಂಬ ಪ್ರಶ್ನೆ ಮೂಡುತ್ತದೆ. ರಜನಿ ಅಷ್ಟು ಸಿಂಪಲ್ ಆಗಿದ್ದರು’ ಎಂದು ವಿವರಿಸುತ್ತಾರೆ