ಮುಂಬೈ, ಆ 11 (DaijiworldNews/HR): ಇಂದು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ಬಹುಕೋಟಿ ವಂಚಕ ಆರೋಪಿ, ಜಾಕ್ವೆಲಿನ್ ಬಾಯ್ ಫ್ರೆಂಡ್ ಆಗಿದ್ದ ಸುಕೇಶ್ ಚಂದ್ರಶೇಖರ್ ಜೈಲಿನಿಂದಲೇ ಭಾವುಕ ಪತ್ರವೊಂದನ್ನು ಬರೆದಿದ್ದಾನೆ.
ಹುಟ್ಟು ಹಬ್ಬದಂದು ಜಾಕ್ವೆಲಿನ್ ಗೆ ಕೈ ಬರಹದಿಂದಲೇ ಸುಕೇಶ್ ಚಂದ್ರಶೇಖರ್ ಪತ್ರ ರೆಡಿಯಾಗಿದ್ದು, ಅತೀ ಶೀಘ್ರದಲ್ಲೇ ಬರುವುದಾಗಿ ತಿಳಿಸಿದ್ದಾನೆ.
ಇನ್ನು ವಂಚನೆಯ ಕಾರಣದಿಂದಾಗಿ ಸದ್ಯ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್, ಜಾಕ್ವೆಲಿನ್ ಗೆ ಪತ್ರಗಳನ್ನು ಬರೆಯುತ್ತಲೇ ಇರುತ್ತಾನೆ.
ಶೀಘ್ರದಲ್ಲೇ ಕಷ್ಟಗಳು ಕರಗಿ, ಮತ್ತೆ ನಾನು ಆಚೆ ಬರುತ್ತೇನೆ. ಮುಂದಿನ ಸಲ ಮತ್ತೆ ಒಟ್ಟಿಗೆ ಹುಟ್ಟು ಹಬ್ಬ ಆಚರಿಸೋಣ ಎಂದು ಪತ್ರದಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.