ಮುಂಬೈ, ಆ 10 (DaijiworldNews/HR): ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರು ತಾವು ಮೂರು ಐಷಾರಾಮಿ ಕಾರು ಕಳೆದುಕೊಂಡ ವ್ಯಥೆಯನ್ನು ಬಿಚ್ಚಿಟ್ಟಿದ್ದಾರೆ.
ಮೊದಲ ಬಾರಿಗೆ ಸನ್ನಿ ಭಾರತಕ್ಕೆ ಬಂದಾಗ ಇಲ್ಲಿನ ಮಳೆಗಾಲದಿಂದ ಅನುಭವಿಸಿದ ಅನುಭವವನ್ನು ಸಂದರ್ಶನವೊಂದರಲ್ಲಿ ಶೇರ್ ಮಾಡಿಕೊಂದಿರುವ ಅವರು, ನನ್ನ ಮೂರು ಕಾರುಗಳು ನಾಶ ಆಗುವಷ್ಟು ಮಳೆ ಬರುತ್ತೆ ಎನ್ನುವ ಅಂದಾಜು ಕೂಡ ನನಗಿರಲಿಲ್ಲ ಎಂದಿದ್ದಾರೆ.
ಇನ್ನು ನಾನು ಮೊದಲು ಕೆಲಸಕ್ಕಾಗಿ ಭಾರತಕ್ಕೆ ಬಂದಾಗ ನಾನು ಮುಂಬೈನಲ್ಲಿರುತ್ತಿದ್ದೆ, ಸಮುದ್ರದ ಸಮೀಪದಲ್ಲಿ ಮನೆ ಮಾಡಿದ್ದೆ. ಆಗ ಮಳೆಯಿಂದ ಮೂರು ಕಾರುಗಳು ಕೆಟ್ಟು ಹೋಗಿದ್ದು, ಮಳೆಗೆ ನನ್ನ ದುಬಾರಿ ಮೂರು ಕಾರುಗಳನ್ನು ಕಳೆದುಕೊಂಡೆ. ಎರಡನ್ನೂ ಒಂದೇ ದಿನ ಕಳೆದುಕೊಂಡೆ. ಬಳಿಕ ಮತ್ತೊಂದು. ಅದು ನಿಜಕ್ಕೂ ನನ್ನ ಕಷ್ಟದ ತಮ್ಮ ಬೇಸರವನ್ನ ನಟಿ ಹೊರಹಾಕಿದ್ದಾರೆ.