ಮುಂಬೈ, ಆ 09(DaijiworldNews/AK):ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತಾಯಿಯಾಗುತ್ತಿರುವ ಸಂತಸದಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಬೇಬಿ ಬಂಪ್ನ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ. ನೀಲಿ ಬಣ್ಣದ ಉಡುಗೆ ಧರಿಸಿ, ತಮ್ಮ ಬೇಬಿ ಬಂಪ್ನ ಕ್ಯಾಮೆರಾ ಕಣ್ಣಿಗೆ ತೋರಿಸಿದ್ದಾರೆ. ಖುಷಿಯಿಂದ ಫೋಟೋಗೆ ಪೋಸ್ ನೀಡಿದ್ದಾರೆ.
ಸಮಾಜವಾದಿ ಪಕ್ಷದ ಲೀಡರ್ ಫಹಾದ್ ಅಹ್ಮದ್ ಅವರನ್ನು ಪ್ರೀತಿಸಿ ಸ್ವರಾ ಭಾಸ್ಕರ್ ಮದುವೆಯಾದರು. ಕಳೆದ ಫೆಬ್ರವರಿ 16ರಂದು ಫಹಾದ್ ಜೊತೆ ಹೊಸ ಬಾಳಿಗೆ ಕಾಲಿಟ್ಟರು. ಈಗ ಚೊಚ್ಚಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಮದುವೆಯಾಗಿ ಮೂರೇ ತಿಂಗಳಿಗೆ ತಾಯಿಯಾಗುವ ಮೂಲಕ ಸಿಹಿಸುದ್ದಿ ಹಂಚಿಕೊಂಡಿದ್ದರು. ಈ ವಿಚಾರವಾಗಿ ನಟಿ ಟ್ರೋಲ್ ಆಗಿದ್ದರು.
ಸಾಕಷ್ಟು ಸಿನಿಮಾಗಳ ಮೂಲಕ ಸ್ವರಾ ಸಂಚಲನ ಮೂಡಿಸಿದ್ದಾರೆ. ಸದ್ಯ ದಾಂಪತ್ಯದ ಕಡೆ ನಟಿ ಹೆಚ್ಚಿನ ಗಮನ ವಹಿಸುತ್ತಿದ್ದಾರೆ. ಹಾಗಾಗಿ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ.