ಮುಂಬೈ, ಆ 07 (DaijiworldNews/AK): ಬಾಲಿವುಡ್ನ ಬಿಗ್ ಬಿ ಅಮಿತಾಭ್ ಬಚ್ಚನ್ ಇದೀಗ ಟ್ರೋಲ್ ಆಗಿದ್ದಾರೆ. ಅದು 13 ವರ್ಷಗಳ ಹಿಂದೆ ‘’ಆಂಗ್ಲ ಭಾಷೆಯಲ್ಲಿ ‘ಬ್ರಾ’ ಏಕವಚನ ಮತ್ತು ‘ಪ್ಯಾಂಟೀಸ್’ ಬಹುವಚನ ಏಕೆ?’’ ಎಂದು ಅಮಿತಾಭ್ ಬಚ್ಚನ್ ಟ್ವೀಟ್ ಮಾಡಿದ್ದರು. ಈಗ ಇದೇ ಟ್ವೀಟ್ನಿಂದ ಅಮಿತಾಭ್ ಬಚ್ಚನ್ ಮುಜುಗರಕ್ಕೆ ಒಳಗಾಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ತಾರೆಯರು ಟ್ರೋಲ್ ಆಗೋದು ಸರ್ವೇ ಸಾಮಾನ್ಯ. ಸದ್ಯ ಬಾಲಿವುಡ್ನ ಬಿಗ್ ಬಿ ಅಮಿತಾಭ್ ಬಚ್ಚನ್ 13 ವರ್ಷಗಳ ಹಿಂದಿನ ಟ್ವೀಟ್ಗೆ ಈಗ ಟ್ರೋಲ್ ಆಗ್ತಿದ್ದಾರೆ.
ಜೂನ್ 12, 2010 ರಲ್ಲಿ ಅಮಿತಾಭ್ ಬಚ್ಚನ್ ಟ್ವೀಟ್ನಲ್ಲಿ, ‘’ಆಂಗ್ಲ ಭಾಷೆಯಲ್ಲಿ ‘ಬ್ರಾ’ ಏಕವಚನ ಮತ್ತು ‘ಪ್ಯಾಂಟೀಸ್’ ಬಹುವಚನ ಏಕೆ?’’ ಎಂದು ಪ್ರಶ್ನಿಸಿದ್ದರು. ಇದೇ ಟ್ವೀಟ್ ಈಗ ವೈರಲ್ ಆಗಿದೆ.
ಇಂತಹ ಟ್ವೀಟ್ಗಳು ನಿಮಗೆ ಶೋಭೆ ತರುವುದಿಲ್ಲ. ನೀವು ಕ್ಷಮೆಯಾಚಿಸಬೇಕು, ಇದನ್ನ ಕೋಟ್ಯಾಧಿಪತಿಯಲ್ಲಿ 5 ಕೋಟಿಯ ಪ್ರಶ್ನೆಯಾಗಿ ಕೇಳಿ’’ ಎಂದು ಟ್ರೋಲಿಗರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ದಯವಿಟ್ಟು ಈ ಟ್ವೀಟ್ನ ಡಿಲೀಟ್ ಮಾಡಿ ನಿಮಗೆ ನೀವೇ ಅವಮಾನ ಮಾಡಿಕೊಳ್ಳಬೇಡಿ, ನಿಮ್ಮಂತಹ ಲೆಜೆಂಡರಿ ನಟರಿಂದ ಇದನ್ನ ನಾವು ನಿರೀಕ್ಷೆ ಮಾಡಿರಲಿಲ್ಲ ಎಂದು ಖಾರವಾಗಿ ಕಾಮೆಂಟ್ ಮಾಡಿದ್ದಾರೆ.