ಮುಂಬೈ, ಆ 04 (DaijiworldNews/HR): ಬಾಲಿವುಡ್ ನಿರ್ಮಾಪಕ, ನಟ ಅನುರಾಗ್ ಕಶ್ಯಪ್ ಅವರ ಪುತ್ರಿ ಆಲಿಯಾ ಕಶ್ಯಪ್ ತಮ್ಮ ಗೆಳೆಯ ಶೇನ್ ಗ್ರೆಗೊಯಿರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಪೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹಲವು ವರ್ಷಗಳಿಂದ ಈ ಜೋಡಿ ಪ್ರೀತಿಸುತ್ತಿದ್ದು, ನಿಶ್ಚಿತಾರ್ಥದ ಸಂಭ್ರಮದಲ್ಲಿ ಬಾಲಿವುಡ್ ನ ನಟ - ಅನ್ಟಿಯರು ಭಾಗಿಯಾಗಿದ್ದರು.
ಇನ್ನು ಆಲಿಯಾ ಕಶ್ಯಪ್ ಅವರು ನಟನಾ ಕ್ಷೇತ್ರದಿಂದ ದೂರವಿದ್ದು, ತಮ್ಮದೇ ಖಾಸಗಿ ಯೂಟ್ಯೂಬ್ ಚಾನೆಲ್ವೊಂದರಲ್ಲಿ ಸಂದರ್ಶನ, ಫಿಟ್ನೆಸ್ ಟಿಪ್ಸ್ ನೀಡುವ ಮೂಲಕ ಆಕ್ಟೀವ್ ಆಗಿದ್ದಾರೆ.