ಬೆಂಗಳೂರು, ಆ 3 (DaijiworldNews/AK): ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ತಾವು ಗುಟ್ಟಾಗಿ ಮದುವೆ ಆಗಿರುವುದಾಗಿ ಹೇಳುವ ಮೂಲಕ ಅಭಿಮಾನಿಗಳ ನಿದ್ದೆಕೆಡಿಸಿದ್ದಾರೆ. ಈ ನಟಿ ಗುಟ್ಟಾಗಿ ಮದುವೆ ಆಗುವುದಕ್ಕೆ ಕಾರಣ ಏನು ಎಂಬ ಪ್ರಶ್ನೆ ಈಗ ಎಲ್ಲರ ಮನದಲ್ಲಿ ಕಾಡತೊಡಗಿದೆ.
ಈ ಹಿಂದೆ ನಟ ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಅದ್ದೂರಿ ಎಂಗೇಜ್ ಆಯಿತ್ತು. ಕೆಲವೇ ತಿಂಗಳಲ್ಲಿ ಅದು ಮುರಿದು ಬಿತ್ತು ಕೂಡ. ಆನಂತರ ಅವರು ಮದುವೆ, ಎಂಗೇಜ್ ಮೆಂಟ್ ವಿಚಾರವಾಗಿ ಎಲ್ಲಿಯೂ ಪ್ರತಿಕ್ರಿಯೆ ನೀಡಿರಲಿಲ್ಲ. ಬಳಿಕ ತೆಲುಗು ರಂಗಕ್ಕೆ ರಶ್ಮಿಕಾ ಎಂಟ್ರಿ ಕೊಟ್ಟ ನಂತರ ಡೇಟಿಂಗ್ ವಿಚಾರವಾಗಿ ನಟ ವಿಜಯ್ ದೇವರಕೊಂಡ ಜೊತೆ ಮತ್ತೆ ಸುದ್ದಿಯಾದರು.
ಇದೇ ಮೊದಲ ಬಾರಿಗೆ ಅವರು ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮಗೆ ಈಗಾಗಲೇ ಗುಟ್ಟಾಗಿ ಮದುವೆ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಅವರ ಮಾತು ಕೇಳಿ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.ರಶ್ಮಿಕಾ ತಾನು ಯಾರೊಂದಿಗೆ ಮದುವೆ ಆಗಿದ್ದೇನೆ ಎನ್ನುವ ವಿಚಾರವನ್ನೂ ಬಹಿರಂಗ ಪಡಿಸಿದ್ದಾರೆ. ಅಂದಹಾಗೇ ಸ್ಟಾರ್ ನಟಿಯ ಮದುವೆ ಆಗೋ ಯೋಗ ಕೂಡಿ ಬಂದಿದ್ದು ಬೇರಾರಿಗೂ ಅಲ್ಲ ನರುಟೊಗೆ ಎನ್ನುವುದು ವಿಶೇಷ.
ಈ ನರುಟೊ ಯಾರಪ್ಪ ಎನ್ನುವ ಪ್ರಶ್ನೆ ಉತ್ತರ ಇಲ್ಲಿದೆ ನೋಡಿ. ಈ ನರುಟೊ ಬೇರೆ ಯಾರೂ ಅಲ್ಲ, ಫೇಮಸ್ ಎನಿಮೆ ಕಾರ್ಟೂನ್ ಸೀರಿಸ್ ನಲ್ಲಿ ಬರುವ ಒಂದು ಪಾತ್ರವಷ್ಟೆ. ಆ ಪಾತ್ರದ ಮೇಲೆ ರಶ್ಮಿಕಾಗೆ ಕ್ರಶ್ಆಗಿದೆಯಂತೆ. ಹಾಗಾಗಿ ಅದರೊಂದಿಗೆ ರಶ್ಮಿಕಾ ಗುಟ್ಟಾಗಿ ಮದುವೆ ಆಗಿದ್ದಾರಂತೆ. ಈ ವಿಷಯವನ್ನು ಅವರು ಕಾರ್ಯಕ್ರಮವೊಂದರಲ್ಲಿ ಹಂಚಿಕೊಂಡಿದ್ದಾರೆ.